ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಧ್ಯಾತ್ಮದಿಂದ ಗೊಂದಲ ಪರಿಹಾರ: ಶ್ರೀ

Lingaraj Badiger
Updated On : 18 Nov 2013, 10:47 am

ಹಾವೇರಿ: ಮನುಷ್ಯ ಇತ್ತೀಚೆಗೆ ಮಾನಸಿಕ ಒತ್ತಡದಲ್ಲಿದ್ದು, ಜೀವನ ಗೊಂದಲದ ಗೂಡಾಗುತ್ತಿದೆ. ಸಂತೋಷ ದೂರವಾಗುತ್ತಿದೆ. ಇಂತಹ ಸ್ಥಿತಿಗೆ ಅಧ್ಯಾತ್ಮ ಚಿಂತನೆಯಿಂದ ಪರಿಹಾರ ಸಾಧ್ಯ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು. ನಗರದ ಸಂಜನಾ ನೃತ್ಯ-ಸಂಗೀತ ಶಾಲೆ ಶನಿವಾರ ಹಮ್ಮಿಕೊಂಡಿದ್ದ ಅಧ್ಯಾತ್ಮ ನೃತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅನೇಕರು ಅಧ್ಯಾತ್ಮ ಕೇವಲ ಸನ್ಯಾಸಿ-ಬೈರಾಗಿಗಳಿಗೆಂದು ಭಾವಿಸಿದ್ದಾರೆ. ಧ್ಯಾನ, ಯೋಗ, ಸಂಗೀತ, ನೃತ್ಯ ಕೂಡ ಅಧ್ಯಾತ್ಮದ ಭಾಗವಾಗಿದ್ದು, ಇವುಗಳನ್ನು ಅಭ್ಯಸಿಸುವುದರಿಂದ ಹಾಗೂ ಆಸ್ವಾದಿಸುವುದರಿಂದ ಮಾನಸಿಕವಾಗಿ ಪರಿವರ್ತನೆಗೊಂಡು ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂದರು ಹೇಳಿದರು.
ಆತ್ಮವಿಕಾಸಕ್ಕೆ ಲಲಿತಕಲೆಗಳು ಬೇಕು. ಬದುಕಿನ ಸಮಸ್ಯೆಗಳಿಗೆ ಪರಿಹಾರ ಹೇಳಲು ಮಾರ್ಗದರ್ಶಕರ ಅಗತ್ಯವಿದೆ. ಆ ಕಾರ್ಯವನ್ನು ಅಧ್ಯಾತ್ಮ ಮಾಡುತ್ತದೆ ಎಂದು ಶ್ರೀಗಳು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿ, ನಮ್ಮ ಪಾರಂಪರಿಕ ಕಲೆಗಳು ಇಂದು ಪಾಶ್ಚಾತ್ಯೀಕರಣಗೊಳ್ಳುತ್ತಿವೆ. ಅದರ ಮೂಲತನ ಕಾಯ್ದುಕೊಳ್ಳುವುದು ಅವಶ್ಯವೆಂದರು.
ಸಾಹಿತಿ ಸತೀಶ ಕುಲಕರ್ಣಿ, ಪರಿಸರವಾದಿ ಮಾಧುರಿ ದೇವಧರ, ರೇಖಿ ತಜ್ಞೆ ಯಮುನಾ ಪ್ರಭಾಕರ ಇದ್ದರು. ಸುಷ್ಮಾ ಜೋಶಿ ಸ್ವಾಗತಿಸಿದರು. ಲಕ್ಷ್ಮೀ ಪಾಟೀಲ್ ನಿರೂಪಿಸಿದರು. ಸುಹಾಸ ವಂದಿಸಿದರು. ಕಾರ್ಯಕ್ರಮದಲ್ಲಿ ಲಕ್ಷ್ಮೀ ಪಾಟೀಲ್ ಅವರಿಂದ ಶರೀಫರ ತತ್ವಪದ ಮತ್ತು ಸಂಜನಾ ಸವಣೂರು ಅವರಿಂದ ನೃತ್ಯ ಪ್ರದರ್ಶನ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement