ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದೇಶದ ಆಸ್ತಿಯಾಗಿ: ಮಕ್ಕಳಿಗೆ ನೆಲವಿಗಿ ಕರೆ

Lingaraj Badiger
Updated On : 18 Nov 2013, 10:47 am

ಬ್ಯಾಡಗಿ: ದೇಶದ ಪ್ರಮುಖ ಆಸ್ತಿಯಾಗಬೇಕಾದ ಯುವಶಕ್ತಿ ಆಧುನಿಕತೆಯ ಗೀಳಿನಲ್ಲಿ ಕತ್ತಲೆ ಜಗತ್ತಿನ ಅಪರಾಧ ಕೃತ್ಯಗಳಲ್ಲಿ ತೊಡಗಿದೆ ಎಂದು ಶಿಕ್ಷಕ ಮೃತ್ಯುಂಜಯ ನೆಲವಿಗಿ ವಿಷಾದ ವ್ಯಕ್ತಪಡಿಸಿದರು.
ಸ್ಥಳೀಯ ಎಸ್‌ಎಸ್‌ಪಿಎನ್ ಪ್ರೌಢಶಾಲೆಯಲ್ಲಿ ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರೂ ಅವರ 125ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ಅತ್ಯಾಚಾರ, ರೇವ್ ಪಾರ್ಟಿಯಂತಹ ಪ್ರಕರಣಗಳು ಭವ್ಯ ಭಾರತಕ್ಕೆ ಯಾವ ಸಂದೇಶ ಸಾರಲಿವೆ ಎಂದು ಪ್ರಶ್ನಿಸಿದರು.
ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳು ಪಠ್ಯದೊಂದಿಗೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕಿದೆ. ಓದುವ ಹವ್ಯಾಸ ರೂಢಿಸಿಕೊಳ್ಳಿ. ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು ಕ್ರಿಯಾಶೀಲತೆ ವೃದ್ಧಿಸಿಕೊಳ್ಳಿ ಎಂದು ಅವರು ಕರೆಕೊಟ್ಟರು.
ವಿದ್ಯಾರ್ಥಿ ಪ್ರತಿನಿಧಿ ವಿನಾಯಕ ವಾಲಿಶೆಟ್ಟರ ಮಾತನಾಡಿ, ಪಂಚವಾರ್ಷಿಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ದೇಶದ ಪ್ರಗತಿಗೆ ನಾಂದಿ ಹಾಡಿದ ಶ್ರೇಯಸ್ಸು ನೆಹರುಗೆ ಸಲ್ಲುತ್ತದೆ ಎಂದರು. ಸೌಭಾಗ್ಯಾ ಹೊಸಳ್ಳಿ, ಯಶೋದಾ ಗುರಣ್ಣನವರ, ನಾಗವೇಣಿ ಸಂಕಣ್ಣನವರ, ಮೇಘಾ ದುಮ್ಮಾಳ ಮಾತನಾಡಿದರು.
ಮಕ್ಕಳಿಂದ ಸಂಗೀತ, ಕಿರುನಾಟಕ, ನೃತ್ಯ ಪ್ರದರ್ಶನಗಳು ನಡೆದವು. ಅನ್ನಪೂರ್ಣಾ ಕರ್ಜಗಿ, ಎಚ್.ಜಿ. ಸುಮಂಗಲಾ, ಸುಲೋಚನಾ ಶಹಾಪುರ, ಸವಿತಾ ಉಪಸ್ಥಿತರಿದ್ದರು. ಎಸ್.ಸಿ. ಎಲಿ ಸ್ವಾಗತಿಸಿದರು. ಕೆ.ಎಚ್. ವೆಂಕಟೇಶ ವಂದಿಸಿದರು. ವಿ.ಬಿ. ಕುರುಬರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement