ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಡು ನುಡಿಗಾಗಿ ಕನ್ನಡಿಗರು ಜಾಗೃತರಾಗಿ: ಲಿಂಗದಹಳ್ಳಿ ಶ್ರೀ

Lingaraj Badiger
Updated On : 18 Nov 2013, 10:47 am

ರಾಣಿಬೆನ್ನೂರು: ರಾಜ್ಯದ ಸಮಸ್ತ ಕನ್ನಡಿಗರಲ್ಲಿ ಸ್ವಾಭಿಮಾನದ ಮನೋಭಾವನೆ ಮೂಡಿಸುವುದರೊಂದಿಗೆ ಕನ್ನಡ ನಾಡು, ನುಡಿಯ ರಕ್ಷಣೆಗಾಗಿ ಕನ್ನಡಿಗರನ್ನು ಜಾಗೃತಿಗೊಳಿಸಿದ ಕೀರ್ತಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಗೆ ಸಲ್ಲುತ್ತದೆ ಎಂದು ಲಿಂಗದಹಳ್ಳಿ ಹಿರೇಮಠದ ಪಟ್ಟಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನುಡಿದರು.
58ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಸಂಗನಬಸವೇಶ್ವರ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿ ಕನ್ನಡಿಗರ ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಧಾನಿ ಬೆಂಗಳೂರು, ಗಡಿನಾಡು ಕಾಸರಗೋಡು, ಬೆಳಗಾವಿ, ಬೀದರ್, ಬಳ್ಳಾರಿ ಹಾಗೂ ಕಾರವಾರದಲ್ಲಿ ಕನ್ನಡ, ಕನ್ನಡಿಗರು ಆತಂಕದಲ್ಲಿದ್ದಾರೆ. ಕನ್ನಡದ ಮೇಲಿನ ದಬ್ಬಾಳಿಕೆ ಹತ್ತಿಕ್ಕಲು ಸ್ವಾಭಿಮಾನದ ಕಿಚ್ಚು ಮೂಡಬೇಕು ಎಂದರು.
ಸ್ವಾಭಿಮಾನಿ ಕರವೇ ಸಂಸ್ಥಾಪಕ ನಿತ್ಯಾನಂದ ಕುಂದಾಪುರ ಮಾತನಾಡಿ, ರಾಜ್ಯದ ಸಮಸ್ತ ಕನ್ನಡಿಗರ ಹಾಗೂ ಕನ್ನಡ ನಾಡು ನುಡಿ ನೆಲ ಜಲ ಭಾಷೆಯ ರಕ್ಷಣೆಗಾಗಿ ಮೂರು ವರ್ಷಗಳ ಹಿಂದೆ ಜನ್ಮ ತಾಳಿರುವ ಸ್ವಾಭಿಮಾನಿ ಕರವೇ ರಾಜ್ಯದ ಕನ್ನಡಿಗರು ಮತ್ತು ಸಮಸ್ತ ಕನ್ನಡ ಆಸ್ತಿಯ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದು, ಕನ್ನಡಿಗರು ಸಹಕರಿಸಬೇಕು ಎಂದು ಹೇಳಿದರು.
ಬಸವರಾಜ ಕೇಲಗಾರ, ನವೀನ ಶೆಟ್ಟಿ, ರಾಘವೇಂದ್ರ ಕಿತ್ತೂರ, ಕೆ.ಸಿ. ನಾಗರಜ್ಜಿ, ಸುನೀಲ್ ಶೆಟ್ಟರ, ಬಸವರಾಜ ಜಾಧವ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement