ಪರಿಸರ ರಕ್ಷಣೆ ಎಲ್ಲರೂ ಮಾಡಿ: ನಂದ್ಯಾಲ
ರಾಣಿಬೆನ್ನೂರು: ಹಸಿರು ಪ್ರತಿಯೊಬ್ಬ ಮಾನವನ ಜೀವನದ ಉಸಿರಾಗಿದ್ದು, ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ ಸಂರಕ್ಷಿಸುವುದರೊಂದಿಗೆ ಪರಿಸರ ರಕ್ಷಣೆಗೆ ಮುಂದಾಗಬೇಕೆಂದು ನಿವೃತ್ತ ಪ್ರಾಚಾರ್ಯ ಬಿ.ಬಿ. ನಂದ್ಯಾಲ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ, ಆಂಗ್ಲೋ ಉರ್ದು ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಗರದ ಮೇಡ್ಲೆರಿ ರಸ್ತೆಯಲ್ಲಿರುವ ಆಂಗ್ಲೋ ಉರ್ದು ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಕುರಿತು ಮಾತನಾಡಿದರು.
ಅಂಜುಮನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶೇರುಖಾನ ಕಾಬೂಲಿ, ಪ್ರಾಂಶುಪಾಲ ಎ.ಎಂ. ಹಾವನೂರು, ಇಕೋ ಕ್ಲಬ್ ಅಧ್ಯಕ್ಷ, ಉಪನ್ಯಾಸಕ ಎಂ.ಡಿ. ಪಾಟೀಲ ಯರೇಶೀಮಿ ಮಾತನಾಡಿದರು.