ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಕ್ಕಳ ರಕ್ಷಣೆ ಆಗಲಿ: ಅಮೃತಾ ಲಿಂಗರಡ್ಡಿ

Lingaraj Badiger
Updated On : 19 Nov 2013, 10:58 am

ಬ್ಯಾಡಗಿ: ಕಾನೂನು ರಚಿಸಿದರಷ್ಟೇ ಸಾಲದು, ಮಕ್ಕಳ ಹಕ್ಕನ್ನು ರಕ್ಷಿಸಬೇಕಿದೆ ಎಂದು ವಿದ್ಯಾರ್ಥಿನಿ ಅಮೃತಾ ಲಿಂಗರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಕದರಮಂಡಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ ನೆಹರೂ ಅವರ 125ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಓರ್ವ ಮಾಜಿ ಪ್ರಧಾನಿ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವ ದೇಶದಲ್ಲಿ ಮಕ್ಕಳ ಹಕ್ಕುಗಳಿಗೆ ರಕ್ಷಣೆ ಇಲ್ಲದಿರುವುದು ದುರಂತವೇ ಸರಿ. ಮದ್ಯಪಾನ, ಅತ್ಯಾಚಾರ, ಬಾಲಕಾರ್ಮಿಕ ಪದ್ಧತಿ ಇತ್ಯಾದಿ ಅನಿಷ್ಟ ಪದ್ಧತಿಗಳು ಜೀವಂತವಾಗಿರುವಾಗ ಮಕ್ಕಳ ಹಕ್ಕು ರಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಲು ಇಡೀ ಸರ್ಕಾರವೇ ಬೆನ್ನು ಬಿದ್ದಿದೆ. ಇದು ಹಾಸ್ಯಾಸ್ಪದ ವಿಷಯ. ಒಂದೊಮ್ಮೆ ಮಗು ಶಾಲೆಯನ್ನು ಬಿಟ್ಟಲ್ಲಿ ಪಾಲಕರು, ಶಿಕ್ಷಕರನ್ನು ಹೊಣೆಯಾಗಿಸಬೇಕು ಎಂದರು. ಮುಖ್ಯಶಿಕ್ಷಕ ಬಿ.ಎಂ. ಜಗಾಪುರ, ಬಿ.ಎಂ. ಚಟ್ಟಿಯಾರ್, ಬಿ.ಕೆ. ಶ್ರೀನಿವಾಸ್, ಜೆ.ಎಚ್. ಕುರಕುಂದಿ, ರಾಜೇ ಶ್ವರಿ ವಿಭೂತಿ, ಎಸ್.ವಿ. ಅಕ್ಕಿ, ಡಿ.ಕೆ. ಹಳ್ಳೇರ ಇದ್ದರು. ಶಾಂತಾ ಕೋಣನವರ ಸ್ವಾಗತಿಸಿದರು. ನಾಗವೇಣಿ ಎರೇಶೀಮಿ ವಂದಿಸಿದರು. ಶೋಭಾ ಜೋಗಣ್ಣನವರ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಬಹುಮಾನ
ಹಾನಗಲ್ಲ: ಕೆಎಲ್‌ಇ ಸಂಸ್ಥೆಯ 98ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಾನಗಲ್ಲಿನ ಕೆಎಲ್‌ಇ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಥಮ ಪಿಯುಸಿ ಮಕ್ಕಳಿಗೆ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಹಿದಾ ಹಸಿನಾ ಬಾನು ಇನಾಮದಾರ, ಬಸವರಾಜ ದೊಳ್ಳಿ, ಸಂದೀಪ ನಾಯಕ, ಶಿವಕುಮಾರ ಗೊಂದಿ, ವಿಚಾರ ಸಂಕಿರಣದಲ್ಲಿ ಶಿವಕುಮಾರ ಕಮಡೊಳ್ಳಿ, ಸಂದೀಪ ನಾಯಕ, ಸಹಿದಾ ಹಸಿನಾ ಬಾನು ಇನಾಮದಾರ ಬಹುಮಾನ ಪಡೆದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಫಿಕಾ ಬಾನು ಮುಲ್ಲಾ, ಬಸವರಾಜ ಹೊಂಬಳಿ, ಪೂಜಾ ನವಲೆ, ಜಹರಾ ಶೇಖ, ವಿಚಾರ ಸಂಕಿರಣದಲ್ಲಿ ಶಬನಮ ಗುಲಾಮಲಿಶಾ, ಬಸವರಾಜ ಹೊಂಬಳಿ, ಶಫಿಕಾ ಬಾನು ಬಹುಮಾನ ಪಡೆದಿದ್ದಾರೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕಾಸಿಮ ಅಲಿ ಬಿದರಗಡ್ಡಿ (ಭಾವಗೀತೆ), ಕಾವ್ಯಾ ಕುದರಿ (ಜಾನಪದ ಗೀತೆ) ತೈಸಿನ ಬಾನು ಸಿದ್ದಿಕಲಿ (ಇಂಗ್ಲಿಷ್ ಪ್ರಬಂಧ), ಶ್ರೇಯಾಂಕಾ ಹಿರೇಮಠ, ಸಚಿನ ಪದಕಿ (ಇಂಗ್ಲಿಷ್ ಚರ್ಚಾಸ್ಪರ್ಧೆ), ಸ್ವಾತಿ ಉರಣಕರ (ಚಿತ್ರಕಲೆ) ತಾಲೂಕು ಮಟ್ಟದಲ್ಲಿ ಬಹುಮಾನ ಗಳಿಸಿದ್ದು, ಅಭಿನಂದಿಸಲಾಯಿತು. ಪ್ರೊ೤ ಕೊರಗಲ್ಲ ವಿರೂಪಾಕ್ಷಪ್ಪ, ಸಾಹಿತಿ ಪ್ರೊ೤ ಮಾರುತಿ ಶಿಡ್ಲಾಪುರ, ಪ್ರಾಚಾರ್ಯ ಶ್ರೀಧರ ಉರಣಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement