ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಾತೃಭಾಷೆಯಲ್ಲಿ ಶಿಕ್ಷಣ ಸಿಗಲಿ: ಆನವಟ್ಟಿ

Lingaraj Badiger
Updated On : 19 Nov 2013, 10:58 am

ಶಿಗ್ಗಾಂವಿ: ಮಾತೃಭಾಷೆ ಕನ್ನಡದಲ್ಲೇ ಎಲ್ಲ ಮಕ್ಕಳೂ ಸಮಾನ ಶಿಕ್ಷಣ ಪಡೆದಲ್ಲಿ ಸಾಮಾಜಿಕ ನ್ಯಾಯ ಸಾಕಾರಗೊಳ್ಳಲು ಸಾಧ್ಯ ಎಂದು ಜಯ ಕರ್ನಾಟಕ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಆನವಟ್ಟಿ ಹೇಳಿದರು.
ಪಟ್ಟಣದ ಶರೀಫ ಶಿವಯೋಗಿ ಭವನದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಬಡ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಖಾಸಗೀಕರಣ ಪ್ರಕ್ರಿಯೆ ಸರ್ಕಾರಗಳ ದಿವಾಳಿತನಕ್ಕೆ ಸಾಕ್ಷಿ ಎಂದರು.
ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಶಿವಲಿಂಗ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ್ನಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮಿಗಳು ಆಶೀರ್ವಚನ ನೀಡಿದರು. ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹಾಗೂ ಡಾ೤ ಸುಮಂಗಲಾ ಅತ್ತಿಗೇರಿ ಉಪನ್ಯಾಸ ನಿಡಿದರು. ಶ್ರೀಕಾಂತ ಕೊಂಚಿಗೇರಿ ಪ್ರಾಸ್ತಾವಿಕ ಮಾತನಾಡಿದರು. ಜಯ ಕರ್ನಾಟಕ ತಾಲೂಕು ಅಧ್ಯಕ್ಷ ದುರಗಪ್ಪ ವಡ್ಡರ ಅಧ್ಯಕ್ಷತೆ ವಹಿಸಿದ್ದರು.
ಸುಭಾಸ ಬೆಂಗಳೂರು, ಸತೀಶ ಮಡಿವಾಳರ, ಪುರಸಭೆ ಸದಸ್ಯ ಫಕ್ಕಿರೇಶ ಶಿಗ್ಗಾಂವಿ, ಪುರಸಭೆ ಮಾಜಿ ಅಧ್ಯಕ್ಷ ರಾಮು ಪೂಜಾರ, ಈರಪ್ಪ ಹಳ್ಳೆಪ್ಪನವರ, ಹನುಮಂತ ಬಂಡಿವಡ್ಡರ, ರವಿ ಓಲೇಕಾರ, ರಮೇಶ ಜಾಲಿಹಾಳ, ಮಾಲತೇಶ ಮಾಳಿ, ಸಿ.ಟಿ. ಪಾಟೀಲ, ಪುರಸಭೆ ಸದಸ್ಯರಾದ ಶಂಕ್ರಮ್ಮ ಅಂದಲಗಿ, ಲಕ್ಷ್ಮಿ ಕಟ್ಟಿಮನಿ, ರಮೇಶ ವನಹಳ್ಳಿ ಇದ್ದರು. ಗಂಗಿಬಾವಿ ವೃತ್ತದಲ್ಲಿ ಕನ್ನಡತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಮೆರವಣಿಗೆ ಮಾಡಲಾಯಿತು. ರಾಜು ಕೆಂಬಾವಿ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement