ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾಮಾಜಿಕ ನ್ಯಾಯ: ಕನಕದಾಸರ ಪ್ರಯತ್ನ ಶ್ಲಾಘನೀಯ: ಶಾಸಕ

Lingaraj Badiger
Updated On : 22 Nov 2013, 11:58 am

ಬ್ಯಾಡಗಿ: ಸಮಾಜದ ಅನಿಷ್ಟ ಎನಿಸಿಕೊಂಡಿದ್ದ ಜಾತಿ ಮತ ಭೇದಗಳನ್ನು ತೊಡೆದು ಹಾಕಿ ಸಾಮಾಜಿಕ ನ್ಯಾಯದಡಿ ಎಲ್ಲ ಸ್ಥರಗಳನ್ನು ಒಂದುಗೂಡಿಸಲು ಕನಕದಾಸರು ಮಾಡಿದ ಪ್ರಯತ್ನ ಶ್ಲಾಘನೀಯ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಸ್ಥಳೀಯ ಎಸ್‌ಜೆಜೆಎಂ ಆವರಣದಲ್ಲಿ ಶಿವರಾಮ ಕಾರಂತ ವೇದಿಕೆಯಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಜೀವರಾಜ ಛತ್ರದ, ಕನಕದಾಸರು ಅಂದಿನ ಮೌಢ್ಯಯುತ ಸಮಾಜವನ್ನು ಜಾತಿ ವ್ಯವಸ್ಥೆ ಹಾಗೂ ಮೇಲು ಕೀಳು ಎಂಬ ಭಾವನೆಗಳಿಂದ ದೂರವಿಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.
ನಾಡಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಶಿವಶಂಕರ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕಾಡಳಿತದ ವತಿಯಿಂದ ನಿವೃತ್ತ ಶಿಕ್ಷಕರಾದ ಎನ್.ಸಿ. ಹುಡೇದ, ಎನ್.ವಿ. ಬಿಲ್ಲಳ್ಳಿ, ಆಕಾಶವಾಣಿ ಕಲಾವಿದ ಅಡಿವೆಪ್ಪ ಕುರಿಯವರ ಇವರುಗಳನ್ನು ಸನ್ಮಾನಿಸಲಾಯಿತಲ್ಲದೇ, ಕುರುಬ ನೌಕರರ ಸಂಘದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಕನಕದಾಸರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವ ಗಳೊಂದಿಗೆ ಮೆರವಣಿಗೆ ಮೂಲಕ ಎಸ್.ಜೆ.ಜೆ.ಎಂ. ಶಾಲಾ ಆವರಣದವರೆಗೆ ತರಲಾಯಿತು. ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕುರುಬ ಸಮಾಜ ಬಾಂಧವರು ಹಾಗೂ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ತಾ.ಪಂ. ಅಧ್ಯಕ್ಷೆ ಚಿನ್ನಮ್ಮ ಫಾಸಿ ಕಾರ್ಯಕ್ರಮ ಉದ್ಘಾಟಿಸಿದರು. ಬೀರಲಿಂಗೇಶ್ವರ ಪಂಚ ಸಮಿತಿ ಅಧ್ಯಕ್ಷ ಚಿಕ್ಕಣ್ಣ ಹಾದಿಮನಿ, ಜಿಪಂ ಸದಸ್ಯರಾದ ಶಂಕ್ರಣ್ಣ ಮಾತನವರ, ವಿರೂಪಾಕ್ಷಪ್ಪ ಬಳ್ಳಾರಿ, ಎಪಿಎಂಸಿ ಸದಸ್ಯರಾದ ಎಸ್. ಸಿ.ಶಿಡೇನೂರ, ರಮೇಶ ಸುತ್ತಕೋಟಿ, ತಾ.ಪಂ. ಸದಸ್ಯ ಮಲ್ಲಿಕಾರ್ಜುನ ಕರಿಲಿಂಗಪ್ಪನವರ, ಮಾಜಿ ಅಧ್ಯಕ್ಷ ದಾನಪ್ಪ ಚೂರಿ, ಪುರಸಭೆ ಸದಸ್ಯ ಯಮನೂರಪ್ಪ ಉಜನಿ ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement