ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 23 Nov 2013, 11:07 am

ಕಬ್ಬು ಬೆಲೆ ನಿಗದಿಗಾಗಿಇಂದು ಬೆಳೆಗಾರರ ಸಭೆ
ಹಾವೇರಿ: ಪ್ರತಿ ಟನ್ ಕಬ್ಬಿಗೆ ಸರ್ಕಾರ ನಿಗದಿಪಡಿಸಿದ ರು. 2500 ಪಾವತಿಸಲು ಆದೇಶಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸುವ ಹಾಗೂ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಚರ್ಚಿಸಲು ನ. 23ರಂದು ಬೆಳಗ್ಗೆ 11 ಗಂಟೆಗೆ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ರೈತರ ಕ್ಷೇಮಾಭಿವೃದ್ಧಿ ಸಂಘ ಸಭೆ ಕರೆದಿದೆ. ಪ್ರತಿ ಟನ್ ಕಬ್ಬಿಗೆ ರು. 2500ಗಳಂತೆ ಕಬ್ಬು ಬೆಳೆಗಾರರಿಗೆ ಪಾವತಿಸುವಂತೆ ಜಿಲ್ಲೆಯ ಸಂಗೂರು ಜಿ.ಎಂ. ಶುಗರ್ಸ್‌ಗೆ ಆದೇಶಿಸಬೇಕು. ಈ ನಿಟ್ಟಿನಲ್ಲಿ ಒತ್ತಡ ತರಲು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸುವರ್ಣಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಆದ್ದರಿಂದ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಜಿಲ್ಲೆಯ ಕಬ್ಬು ಬೆಳೆಗಾರರು ಪಾಲ್ಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಅಶೋಕರೆಡ್ಡಿ ಮರ್ಚರಡ್ಡೇರ ತಿಳಿಸಿದ್ದಾರೆ.
ಶಿವಚಿದಂಬರ ಸ್ವಾಮಿಗಳ ಜಯಂತಿ ಇಂದು
ಹಾನಗಲ್ಲ: ಶಿವ ಚಿದಂಬರ ಸ್ವಾಮಿಗಳ 255ನೇ ಜಯಂತ್ಯುತ್ಸವ ಶ್ರೀ ಚಿದಂಬರ ಜನ್ಮೋತ್ಸವ ಸಮಿತಿ ಆಶ್ರಯದಲ್ಲಿ ಪಟ್ಟಣದ ಶ್ರೀ ಶಂಕರಮಠದಲ್ಲಿ ನ. 23ರಂದು ನಡೆಯಲಿದೆ. 25 ವರ್ಷಗಳಿಂದ ಜಯಂತ್ಯುತ್ಸವವನ್ನ್ನು ಹಾನಗಲ್ಲಿನಲ್ಲಿ ಆಚರಿಸಲಾಗುತ್ತಿದ್ದು, ಪ್ರಸ್ತುತ ವರ್ಷದ ಜನ್ಮೋತ್ಸವವು 27ನೇಯದ್ದಾಗಿದೆ. ಅಂದು ಬೆಳಗ್ಗೆ 5:30ಕ್ಕೆ ಕಾಕಡಾರತಿ, 8ಕ್ಕೆ ಸಾಮೂಹಿಕ ನಾಮಜಪ ಪಠಣ, 9:30ಕ್ಕೆ ಸತ್ಯ ಚಿದಂಬರ ಪೂಜೆ, 10:30ರಿಂದ ಜನ್ಮೋತ್ಸವ ಅಭಂಗಗಳ ಪಠಣ, ಮಧ್ಯಾಹ್ನ 12ಕ್ಕೆ ಚಿದಂಬರ ಸ್ವಾಮೀಜಿ ತೊಟ್ಟಿಲೋತ್ಸವ, ಸತ್ಯ ಚಿದಂಬರ ಪೂಜಾ, ಪ್ರಸಾದ ವಿತರಣೆ ಜರುಗುವುದು. ತಾಲೂಕಿನ ಎಲ್ಲ ಸದ್ಭಕ್ತರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ತಿಳಿಸಿದ್ದಾರೆ.
ದಿಂಡಿ ಯಾತ್ರೆ: 29ರಂದು ಇಲ್ಲಿನ ಪಿಳ್ಳನಕಟ್ಟೆ ಶ್ರೀ ಹನುಮಂತ ದೇವಸ್ಥಾನದಿಂದ ಶ್ರೀಕ್ಷೇತ್ರ ಗಂಗಾಬಾಬೂಳಗಾಂವ ಗ್ರಾಮಕ್ಕೆ ಪಾದಯಾತ್ರೆ ಮೂಲಕ ಚಿದಂಬರ ದಿಂಡಿಯಾತ್ರೆ ಬೆಳಗ್ಗೆ 6:30ಕ್ಕೆ ಹೊರಡುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಚಿದಂಬರ ಕಮಡೊಳ್ಳಿ ಮೊ: 9482431569 ಸಂಖ್ಯೆಗ್ನೆ ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಷಣ್ಮುಖಪ್ಪಗೆ ಡಾಕ್ಟರೇಟ್
ಹಿರೇಕೆರೂರು: ತಾಲೂಕಿನ ಗುಡ್ಡದ ಮಾದಾಪುರ ಗ್ರಾಮದ ಡಾ. ಷಣ್ಮುಖಪ್ಪ ಕಾಗಿನೆಲ್ಲಿ ಇವರಿಗೆ ಪಿಎಚ್‌ಡಿ ಪದವಿ ದೊರೆತಿದೆ. ಇವರು ಕ್ಷ-ಕಿರಣಗಳು ಹಾಯ್ದಾಗ ರಸಾಯನಿಕ ವಾತಾವರಣ ಪರಿಣಾಮದ ಕುರಿತು ಭೌತಶಾಸ್ತ್ರ ವಿಷಯದಲ್ಲಿ ಮಂಡಿಸಿದ ಮಹಾ ಪ್ರಭಂದಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ಗುಲ್ಬರ್ಗದ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಡಾ. ಬಿ.ಆರ್. ಕೆರೂರು ಮಾರ್ಗದರ್ಶನ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement