ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಿಎಂ ರಾಜಿನಾಮೆ ನೀಡಲಿ

Vishwanath S
Updated On : 24 Nov 2013, 2:27 am

ಕನ್ನಡಪ್ರಭ ವಾರ್ತೆ, ಹಾವೇರಿ, ನ. 23
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಿದ್ದಪ್ಪ ವೃತ್ತದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ ಮಾತನಾಡಿ, ಸಾಮಾನ್ಯ ಜನರಿಗೆ ಇರುವ ತಿಳಿವಳಿಕೆ ಮುಖ್ಯಮಂತ್ರಿಗೆ ಇಲ್ಲದಿರುವುದು ನಮ್ಮ ರಾಜ್ಯದ ದೌರ್ಭಾಗ್ಯ. ಯಾಸೀನ್ ಭಟ್ಕಳ ಯಾರು? ಎಂದು ಕೇಳುವ ಮೂಲಕ ಅವಿವೇಕತನ ಮೆರೆದು ರಾಜ್ಯದ ಮಾನ ಕಳೆದಿದ್ದಾರೆ. ಅಪ್ರಬುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ ಬಿಜೆಪಿ ಯುವಮೋರ್ಚಾ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿ, ಮುಖ್ಯಮಂತ್ರಿ ಹೇಳಿಕೆ ರಾಜ್ಯಕ್ಕೆ ಅವಮಾನಕರ. ಬಿಜೆಪಿ ಕಚೇರಿ ಮುಂಭಾಗ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಸ್ಫೋಟದ ಮುಖ್ಯ ರೂವಾರಿಯಾಗಿರುವ ಯಾಸೀನ್ ಭಟ್ಕಳ ಯಾರೆಂದು ಗೊತ್ತಿಲ್ಲದ ಸಿದ್ದರಾಮಯ್ಯ ಆ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ. ಕೋಮುವಾದಿಯಾಗಿ ಯೋಜನೆ ಅನುಷ್ಠಾನ ಮಾಡುತ್ತ, ಜನರ ಮಧ್ಯೆ ಒಡಕು ಹುಟ್ಟಿಸಿ, ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ಇದು ನಾಚಿಕೆಗೇಡಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹುಸೇನಸಾಬ ನದಾಫ್, ಪ್ರಧಾನ ಕಾರ್ಯದರ್ಶಿ ಸೋಮೇಶ ಕುರ್ಡೇಕರ, ನಗರ ಘಟಕ ಅಧ್ಯಕ್ಷ ವೆಂಕಟೇಶ ದೈವಜ್ಞ, ನಗರ ಘಟಕ ಉಪಾಧ್ಯಕ್ಷ ಮಧುಕರ ನವಲೆ, ಲಕ್ಷ್ಮಣ ರಜಪೂತ್, ಕಾರ್ಯಕರ್ತರಾದ ಮಹಾವೀರ ಘನಾತೆ, ವಿನಯ್ ಪಾಟೀಲ್, ಅಕ್ಷೋಭ್ಯ ಗುತ್ತಲ, ಚೇತನ ಕುರುಬಗೊಂಡ, ರಾಘವೇಂದ್ರಸಿಂಗ್, ಭೀಮಾಸಿಂಗ್, ಪುಂಡಲೀಕ ಮಧುರಕರ, ಆನಂದ ಕಲಾಲ, ಸುಭಾಸ ಕುರ್ಡೇಕರ, ನಗರಸಭಾ ಸದಸ್ಯರಾದ ಕರಬಸಪ್ಪ ಹಳದೂರ, ಹಿರಿಯರಾದ ಶಿವಲಿಂಗಪ್ಪ ಕಲ್ಯಾಣಿ, ಶ್ರೀಪಾದ ಬೆಟಗೇರಿ, ಬಸವರಾಜ ಹೊಸಮನಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement