ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 25 Nov 2013, 11:07 am

ಇಂದಿರಾ ಜನ್ಮದಿನಾಚರಣೆ
ಹಾನಗಲ್ಲ: ಸ್ಥಳೀಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ವೇಳೆ ಸಿ.ಎಸ್. ಬಡಿಗೇರ, ಕೆ.ಎಲ್. ದೇಶಪಾಂಡೆ, ಏಳುಕೋಟೆಪ್ಪ ಹಾವಳೇರ ಮಾತನಾಡಿದರು. ಪಕ್ಷದ ಮುಖಂಡರಾದ ರಾಮಣ್ಣ ಪೂಜಾರ, ನಾಗಪ್ಪ ಸವದತ್ತಿ, ರಾಮಣ್ಣ ಮಾಸನಕಟ್ಟಿ, ಗಜಾನನ ಧೊಂಗಡೆ, ಪ್ರಭು ದೊಡ್ಡಕುರಬರ, ಪುಟ್ಟಪ್ಪ ಬಳಿಗಾರ, ಮಖಬೂಲಸಾಬ ಹುಲಗೂರ, ಪ್ರಶಾಂತ ಗೊಂದಿ, ಚಂದ್ರಣ್ಣ ಜನಗೇರಿ, ಪಾಪಾಸಾಬ ಕೇಣಿ, ಸೋಮಣ್ಣ ಕಂಚಿನೆಗಳೂರ, ಇಮಾಮಸಾಬ ಕಂಚಿನೆಗಳೂರ, ಬಸನಗೌಡ್ರು ಪಾಟೀಲ, ಇಬ್ರಾಹಿಂ ಕಲ್ಲಾಪುರ, ಮಾಲತೇಶ ಹಾವಳೇರ, ಫಕ್ಕಿರಪ್ಪ ಹಾವಳೇರ, ಫಕ್ಕೀರಪ್ಪ ತಳವಾರ ಇದ್ದರು.
ಮಂಜುನಾಥ ನೇಮಕ
ಹಾನಗಲ್ಲ: ಮಕರವಳ್ಳಿ ಗ್ರಾಮದ ಮಂಜುನಾಥ ಮಹಾದೇವಪ್ಪ ಮಲಗುಂದ ಅವರನ್ನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ವಿಭಾಗದ ಹಾವೇರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನ್ನಾಗಿ ನೇಮಕ ಮಾಡಲಾಗಿದೆ. ಪರಿಶಿಷ್ಟ ಪಂಗಡಗಳ ವಿಭಾಗದ ರಾಜ್ಯ ಅಧ್ಯಕ್ಷ ಟಿ. ಈಶ್ವರ ಆದೇಶ ನೀಡಿದ್ದು, ತತ್ವ ಸಿದ್ದಾಂತಕ್ಕೆ ಬದ್ಧರಾಗಿ, ಪಕ್ಷ ಸಂಘಟನೆಯಲ್ಲಿ ತೊಡಗಬೇಕೆಂದು ತಿಳಿಸಿದ್ದಾರೆ.
ವಂದನಾ ರಾಜ್ಯಮಟ್ಟಕ್ಕೆ
ರಾಣಿಬೆನ್ನೂರು: ಹಾವೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಒಲಂಪಿಯಾಡ್ ಪರೀಕ್ಷೆಗೆ ಹಾಜರಾಗಿದ್ದ ತಾಲೂಕಿನ ತುಮ್ಮಿನಕಟ್ಟಿ ಸರ್ಕಾರಿ ಹಿಪ್ರಾ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ವಂದನಾ ಪಾಂಡುರಂಗ ಸೊಲ್ಲಾಪುರ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಬಾಲಕಿಯನ್ನು ಎಸ್‌ಡಿಎಂಸಿ ಅಧ್ಯಕ್ಷರು, ಪ್ರಧಾನ ಗುರುಗಳು, ಅಜ್ಜ ಕೆಂಚಪ್ಪ ಸೊಲ್ಲಾಪುರ, ಪಾಂಡುರಂಗ ಸೊಲ್ಲಾಪುರ ಅಭಿನಂದಿಸಿದ್ದಾರೆ.
ಸಾಮೂಹಿಕ ವಿವಾಹ
ಹಾವೇರಿ: ಫೆ. 20ರಂದು ಕರ್ನಾಟಕ ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ವೇದಿಕೆಯಿಂದ 2 ಸಾವಿರ ಜೋಡಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ ದೊಡ್ಡಮನಿ ತಿಳಿಸಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿ ವರ್ಷ ಪೂರ್ಣಗೊಳಿಸಿರುವ ಕಾರ್ಮಿಕರ ಮಕ್ಕಳ ವಿವಾಹವನ್ನು ಸಂಘದ ವತಿಯಿಂದ ಮಾಡಿಸಲಾಗುವುದು. ಬಾಲ್ಯ ವಿವಾಹ ಹಾಗೂ ಎರಡನೇ ವಿವಾಹಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರದಿಂದ ನೀಡುವ ರು. 10 ಸಾವಿರ ಪ್ರೋತ್ಸಾಹಧನ, ಗುರುತಿನ ಚೀಟಿ ಹೊಂದಿರುವ ಕಟ್ಟಡ ಕಾರ್ಮಿಕರಿಗೆ ಇಲಾಖೆ ನೀಡುವ ರು. 50 ಸಾವಿರ ಸಹಾಯಧನ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ನೂತನ ದಂಪತಿಗಳಿಗೆ ಜೀವ ವಿಮೆ ಮಾಡಿಸಲಾಗುವುದು. ಸಾಮೂಹಿಕ ವಿವಾಹದ ಖರ್ಚು ಭರಿಸಲು ನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಗುವುದು ಎಂದರು. ಅಶೋಕ ಓಲೇಕಾರ್, ರವಿ ಯಲ್ಲಾಪುರ, ಬಸವರಾಜ ಚಪ್ಪರಮನಿ, ಹನ್ಮಂತಪ್ಪ ನಡಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement