ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 25 Nov 2013, 11:08 am

ಅತಿಥಿ ಉಪನ್ಯಾಸಕರ ಹಕ್ಕೊತ್ತಾಯಗಳ ರಾಜ್ಯ ಸಮಾವೇಶ 27ರಂದು
ಹಾವೇರಿ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ನ. 27ರಂದು ಅತಿಥಿ ಉಪನ್ಯಾಸಕರ ಹಕ್ಕೊತ್ತಾಯಗಳ ರಾಜ್ಯ ಸಮಾವೇಶ ಜರುಗಲಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ವಸಂತಗೌಡ ಪಾಟೀಲ ಹೇಳಿದರು. ಸರ್ಕಾರಿ ಕಾಲೇಜುಗಳಲ್ಲಿ ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಮತ್ತು ವೇತನ ಹೆಚ್ಚಳಕ್ಕಾಗಿ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯಿಸುತ್ತಿದೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಲು ಬೆಳಗಾವಿಯಲ್ಲಿ ನ. 27ರಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹಿರಿಯ ಪತ್ರಕರ್ತ ನಾಡೋಜ ಡಾ೤ ಪಾಟೀಲ ಪುಟ್ಟಪ್ಪ ಉದ್ಘಾಟಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೆಪ್ಟೆಂಬರ್‌ನಲ್ಲಿ ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಸಮಾವೇಶದ ಮೂಲಕ ಹಾಗೂ ಸೆ. 25ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲಾಗಿತ್ತು. ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪಾಟೀಲ ದೂರಿದರು. ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸದಿದ್ದರೆ 2014ರ ಜನವರಿ 21ರಿಂದ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದರು. ಸಂಘದ ರಾಜ್ಯ ಮುಖಂಡರಾದ ಆಶಾ ಗುಡಿನ, ಎಚ್.ಎಸ್. ಸಿದ್ದರಾಜು. ಜಿಲ್ಲಾ ಮುಖಂಡ ವಿನಾಯಕ ಯಳಮಲ್ಲಿ, ಎಸ್‌ಎಫ್‌ಐ ಸುಭಾಸ ಮಾದರ ಪತ್ರಿಕಾ ಗೋಷ್ಠಿಯಲ್ಲಿದ್ದರು.
ಟಿಪ್ಪು ಜನ್ಮದಿನ ಆಚರಣೆ
ಹಾನಗಲ್ಲ: ಕರ್ನಾಟಕ ಮುಸ್ಲಿಂ ಮಿಸಲಾತಿ ಹೋರಾಟ ಸಮಿತಿ ತಾಲೂಕು ಘಟಕದಿಂದ ಹಾನಗಲ್ಲಿನಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನ ಆಚರಿಸಲಾಯಿತು. ಮುಸ್ಲಿಂ ಮೀಸಲಾತಿ ಹೊರಾಟ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಖಾದ್ರಿ ನೇತೃತ್ವದಲ್ಲಿ ನಡೆದ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆಯಲ್ಲಿ ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದವು. ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಮುಸ್ಲಿಂ ಮಿಸಲಾತಿ ಹೊರಾಟ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಶಂಪೀರ್ ಇನಾಂದಾರ, ಪದಾಧಿಕಾರಿಗಳಾದ ಎಂ.ಐ. ಹೊಂಡದ, ಎಸ್.ಎನ್. ನಾಯಕ, ಅಕ್ರಂ ಯಲಿಗಾರ, ಮಖಬೂಲ ಬಡಗಿ, ಆರ್.ಜಿ. ಸರ್ವಿಕೇರಿ, ಎಸ್.ಎಂ. ರಿಕಾಠಿ, ವಿವಿಧ ಸಂಘಟನೆಗಳ ದಾನಪ್ಪ ಗಂಟೇರ, ಹನುಮಂತಪ್ಪ ಕೊಣನಕೇರಿ, ಪರಶುರಾಮ ಡೂಗನವರ, ಬಸಣ್ಣ ಹೊಸಮನಿ ಮುಂತಾದವರು ಪಾಲ್ಗೊಂಡಿದ್ದರು.
ಹೊಲಿಗೆ ಯಂತ್ರ ವಿತರಣೆ
ಹಾನಗಲ್ಲ: ಸರ್ಕಾರದ ಯೋಜನೆಯಾದ ಬಡ ಹೆಣ್ಣು ಮಕ್ಕಳಿಗೆ ಸ್ವ-ಉದ್ಯೋಗ ಮಾಡಲು 2011-12ನೇ ಸಾಲಿನ ಹೊಲಿಗೆ ತರಬೇತಿ ನೀಡಿ ತರಬೇತಿ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಹಿಂದಿಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಉಚಿತ ಹೊಲಿಗೆ ಯಂತ್ರ ಹಾಗೂ ಅರ್ಹರಿಗೆ ಪ್ರಮಾಣ ಪತ್ರವನ್ನ್ನು ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಮನೋಹರ ತಹಶೀಲ್ದಾರ್ ನೀಡಿದರು. ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ, ಜಿಪಂ ಸದಸ್ಯರಾದ ಬಸವರಾಜ ಹಾದಿಮನಿ, ಪದ್ಮನಾಭ ಕುಂದಾಪುರ, ಮಹದೇವಪ್ಪ ಬಾಗಸರ, ಕಸ್ತೂರೆವ್ವ ವಡ್ಡರ, ಅಭಿದಾಬಿ ನದಾಫ್, ತಾಲೂಕು ದಂಡಾದಿಕಾರಿ ಡಾ೤ ನಾಗೇಂದ್ರ ಹೊನ್ನಳ್ಳಿ, ತಾಪಂ ಇಒ ಡಾ೤ ಬಸವರಾಜಪ್ಪ ಡಿ.ಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎನ್.ಎಂ. ಪೂಜಾರ ಇದ್ದರು.
ಶಾಸಕ ಮನೋಹರಗೆ ಸನ್ಮಾನ
ಹಾನಗಲ್ಲ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಅಂಜುಮನ್ ಕಮಿಟಿಯಿಂದ ಶಾಸಕ ಮನೋಹರ ತಹಸೀಲ್ದಾರ್ ಅವರನ್ನ್ನು ಸನ್ಮಾನಿಸಲಾಯಿತು. ಗ್ರಾಮದ ಗಣ್ಯರಾದ ಯಾಸಿರಖಾನ್ ಪಠಾಣ, ಎಂ.ಎಸ್. ಪಾಟೀಲ, ಸಿ.ಎಂ. ಮಲ್ಲಮ್ಮನವರ, ಸೋಗಾಜಿ ಪುರೋಹಿತ, ಮುನ್ನಾ ಪಠಾಣ, ಮುಖಾಶಿನೂರ, ಅಂಜುಮನ್ ಕಮಿಟಿ ಅಧ್ಯಕ್ಷ ರಾಜೇಸಾಬ ಲಡ್ಡುಪೀರ, ಹಜರೆಸಾಬ ಮಕಾನದಾರ, ಗುಡದಪ್ಪ ನೆವರದರ, ಎಂ.ಬಿ. ಬಂಕಾಪುರ, ಆರ್.ಎಂ. ವಾಗಿನಕೊಪ್ಪ, ಗಿರಿಸಿನಕೊಪ್ಪ, ಕಬ್ಬೂರ ಉಪಸ್ಥಿತರಿದ್ದರು.
ಏಡ್ಸ್ ಜನಜಾಗೃತಿ ಜಾಥಾ
ಹಿರೇಕೆರೂರು: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಪಟ್ಟಣದ ಕೆ.ಎಚ್. ಪಾಟೀಲ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ಆಶ್ರಯದಲ್ಲಿ ತಾಲೂಕಿನ ಬುರುಡಿಕಟ್ಟಿ ಗ್ರಾಮದಲ್ಲಿ ಜನಜಾಗೃತಿ ಜಾಥಾ ಜರುಗಿತು.
ಭಿತ್ತಿಚಿತ್ರ ಹಿಡಿದು ವಿದ್ಯಾರ್ಥಿಗಳು ಮೆರವಣಿಗೆ ಮಾಡಿದರಲ್ಲದೆ, ಕರಪತ್ರ ವಿತರಿಸಿ, ತಿಳಿವಳಿಕೆ ಮೂಡಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮಮಾಧಿಕಾರಿ ಎಚ್.ಎಸ್. ಹಲಗೇರಿ, ಅಸುರಕ್ಷಿತ ಹಾಗೂ ಅನೈತಿಕ ಚಟುವಟಿಕೆಯಿಂದ ಮಾರಕ ರೋಗಗಳು ಬರುತ್ತವೆ. ಅಮೂಲ್ಯ ಜೀವನ ಹಾಳಾಗುತ್ತದೆ. ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಪಾರಮ್ಮ ತಳವಾರ, ಉಪಾಧ್ಯಕ್ಷೆ ಲೀಲಾವತಿ ಪಾಟೀಲ, ಸದಸ್ಯರಾದ ಭೀಮನಗೌಡ ದೊಡ್ಡಗೌಡ್ರ, ಶೇಖಣ್ಣ ಬಿಳಕಿ, ಮೌನೇಶ ಬಡಿಗೇರ, ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ ಕೋರಿಶೆಟ್ಟರ, ನಾಗರಾಜ ಮಾಳೂರು ಹಾಗೂ ಶಾಲೆ ಶಿಕ್ಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement