ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಎಸ್ಸಿ, ಎಸ್ಟಿ ಕಾಲನಿ ಅಭಿವೃದ್ಧಿ: ಬಣಕಾರ

Mainashree
Updated On : 26 Nov 2013, 11:05 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ನ. 25
ತಾಲೂಕಿನ ಎಲ್ಲ ಗ್ರಾಮಗಳ ಪರಿಶಿಷ್ಟ ಜಾತಿ, ವರ್ಗಗಳ ಕಾಲನಿಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಪಕ್ಕಾ ಗಟಾರಗಳನ್ನು ಮಾಡುವ ಮೂಲಕ ಅಭಿವೃದ್ಧಿಗೆ ಪೂರಕ ಕೆಲಸ ಮಾಡಲಾಗುವುದು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ತಕ್ಷಣ ಕಾಮಗಾರಿಗಳನ್ನು ಆರಂಭಿಸಲಾಗುವುದು. ಅಭಿವೃದ್ಧಿಗಾಗಿ ನಿಗದಿಪಡಿಸಿದ ಹಣ ಸದ್ವಿನಿಯೋಗವಾಗಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಕಳಗೊಂಡ ಗ್ರಾಮದ ಪರಿಶಿಷ್ಟ ಪಂಗಡದ ಕಾಲನಿಯಲ್ಲಿ ಪರಿಶಿಷ್ಟ ಪಂಗಡದ ಇಲಾಖೆ ವತಿಯಿಂದ ಮಂಜೂರಾದ 10 ಲಕ್ಷ ಮೊತ್ತದ ಮಹರ್ಷಿ ವಾಲ್ಮೀಕಿ ಸಭಾಭವನ ಕಟ್ಟಡ ಮತ್ತು ಲೋಕೋಪಯೋಗಿ ಇಲಾಖೆಯ ರು. 6 ಲಕ್ಷ ಮೊತ್ತದಲ್ಲಿ ಪರಿಶಿಷ್ಟ ಜಾತಿಯ ಕಾಲನಿಗೆ ಕಾಂಕ್ರೀಟ್ ರಸ್ತೆ ಮತ್ತು ಗಟಾರ ನಿರ್ಮಾಣ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಹಣ ಬಿಡುಗಡೆ ಮಾಡುತ್ತದೆ. ಒಮ್ಮೆ ಮಂಜೂರಾದ ಕಾಮಗಾರಿಗಳು ಪುನಃ ಆಗಲು ಸಾಧ್ಯವಿಲ್ಲ. ಕಾರಣ ಬಂದ ಅನುದಾನ ಸದ್ಬಳಕೆಯಾಗಬೇಕು. ಗುಣಮಟ್ಟದ ಕಾಮಗಾರಿ ನಡೆಯಬೇಕು. ಸಾರ್ವಜನಿಕರಿಂದ ಯಾವುದೆ ದೂರಗಳು ಬಾರದ ರೀತಿಯಲ್ಲಿ ಗುಣಮಟ್ಟದಿಂದ ಕಾಮಗಾರಿ ಪೂರೈಸಬೇಕೆಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಜಿಪಂ ಸದಸ್ಯೆ ಬಸಮ್ಮ ಅಬಲೂರ, ತಾಪಂ ಸದಸ್ಯೆ ರೂಪಾ ಆಡೂರ, ಗ್ರಾಪಂ ಉಪಾಧ್ಯಕ್ಷೆ ದ್ಯಾಮವ್ವ, ನಿರ್ಮಿತಿ ಕೇಂದ್ರದ ಅಭಿಯಂತ ಶಾಂತಕುಮಾರ, ಸದಸ್ಯರಾದ ನಾಗಮ್ಮ ಮಡಿವಾಳರ, ಗಣೇಶಪ್ಪ ನಿಂಬೆಗೊಂದಿ, ರಂಗಪ್ಪ ಕುರುಬರ, ಗುತ್ತಿಗೆದಾರರಾದ ಪ್ರಕಾಶ ಗೌಡರ, ಪ್ರಭು ಮಳವಳ್ಳಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement