ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಟಿಪ್ಪು ಪ್ರಾಧಿಕಾರ ರಚಿಸಿ: ಸೌದಾಗರ

Mainashree
Updated On : 26 Nov 2013, 11:07 am

ಬ್ಯಾಡಗಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾ ವೀರ ಟಿಪ್ಪು ಸುಲ್ತಾನನನ್ನು ಮುಸ್ಲಿಂ ಸಮುದಾಯದ ಪ್ರತಿನಿಧಿ ಎಂದು ಬಿಂಬಿಸುವುದು ತಪ್ಪು. ಕೂಡಲ ಸಂಗಮ, ಕಾಗಿನೆಲೆ ಮಾದರಿಯಲ್ಲಿ ಪ್ರತ್ಯೇಕ ಟಿಪ್ಪು ಪ್ರಾಧಿಕಾರ ರಚಿಸುವಂತೆ ಡಾ೤ ಸೌದಾಗರ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದಲ್ಲಿ ಟಿಪ್ಪುಸುಲ್ತಾನ್ ಜಯಂತ್ಯುತ್ಸವದ ಅಂಗವಾಗಿ ಸೋಮವಾರ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ತಾಲೂಕು ಘಟಕ ಆಯೋಜಿಸಿದ್ದ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದರು.
ಟಿಪ್ಪುವನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಆತನ ದೇಶಪ್ರೇಮಕ್ಕೆ ಅಗೌರವ ತೋರಿಸಿದಂತೆ. ರಾಜಕೀಯ ಲಾಭಕ್ಕಾಗಿ ಟಿಪ್ಪು ಹೆಸರನ್ನು ಬಳಸುವುದು ಅಥವಾ ತಿರಸ್ಕರಿಸುವುದನ್ನು ವೇದಿಕೆ ಖಂಡಿಸುತ್ತದೆ ಎಂದರು.
ನಿಸ್ಸಾರ್ ಅಹ್ಮದ್ ಹಾವನೂರ ಮಾತನಾಡಿ, ಟಿಪ್ಪು ಮೈಸೂರಿನ ಹುಲಿ ಎಂದು ಬಿಂಬಿತವಾಗಿದ್ದು, ಬಿರುದನ್ನು ರಾಜಕೀಯ ಪಕ್ಷ ಅಥವಾ ಸರ್ಕಾರ ನೀಡಿದ್ದಲ್ಲ. ಬ್ರಿಟಿಷರ ವಿರುದ್ಧ ಆತ ಕೆಚ್ಚೆದೆಯಿಂದ ಹೋರಾಡಿದ್ದು ಸ್ಮರಣೀಯವಾಗಿದೆ ಎಂದರು.
ಬಾಬು ಬಡಿಗೇರ ಮಾತನಾಡಿ, ಟಿಪ್ಪು ಜನ್ಮದಿನಾಚರಣೆ ಅಂಗವಾಗಿ ನ. 20ರಂದು ಸರ್ಕಾರಿ ರಜೆ ಘೋಷಿಸಬೇಕು. ಶಾಲೆ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ಜಿನ್ನಾ ಹಲಗೇರಿ ಮಾತನಾಡಿ, ಟಿಪ್ಪು ಮೈಸೂರು ಸಂಸ್ಥಾನವನ್ನು ಆಳಿದ. ಆಗ ಸಾಮಾಜಿಕ ನ್ಯಾಯದಡಿ ಎಲ್ಲ ಹಿಂದೂ ದೇವಾಲಯಗಳನ್ನು ರಕ್ಷಣೆ ಮಾಡಿದ ಉದಾಹರಣೆಗಳಿವೆ. ಆತ ಹಿಂದೂ ವಿರೋಧಿ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement