ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಲು ಆಗ್ರಹ
ಶಿಗ್ಗಾಂವಿ: ಪಟ್ಟಣದ ವಾರ್ಡ್ 23ರ ರಾಜೀವ ನಗರದ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಜಯ ಕರ್ನಾಟಕ ಸಂಘಟನೆಯವರು ಮುಖ್ಯಾಧಿಕಾರಿ ಪಿ.ಎಂ. ಚನ್ನಪ್ಪನವರಗೆ ಸೋಮವಾರ ಮನವಿ ಸಲ್ಲಿಸಿ ಆಗ್ರಹಿಸಿದರು.
ಜಯ ಕರ್ನಾಟಕ ಅಧ್ಯಕ್ಷ ದುರಗಪ್ಪ ವಡ್ಡರ ಮಾತನಾಡಿ, ಶಿಗ್ಗಾಂವಿ ಪಟ್ಟಣದ ರಾಜೀವ ನಗರದಲ್ಲಿ 20 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಎರಡು ತಿಂಗಳಿನಿಂದ ಗಟಾರ ತೆಗೆದು ಹಾಗೇ ಬಿಟ್ಟಿದ್ದಾರೆ. ರಸ್ತೆಯೂ ಹದಗೆಟ್ಟಿದೆ. ಯಾವುದೇ ರೀತಿಯ ಸಿಡಿಗಳು ಇಲ್ಲ. ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆಯೂ ಇಲ್ಲ. ರಾಜೀವ ನಗರದ ನಿವಾಸಿಗಳಿಗೆ ಈ ಎಲ್ಲ ಸೌಲಭ್ಯ ಒದಗಿಸಬೇಕೆಂದರು. ಮೇಲಧಿಕಾರಿಗಳು ಮೂರು ದಿನಗಳ ಒಳಗಾಗಿ ರಸ್ತೆ ಮತ್ತು ಗಟಾರ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಉಪಾಧ್ಯಕ್ಷ ಈರಪ್ಪ ಹಳೇಪ್ಪನವರ, ಪ್ರಧಾನ ಕಾರ್ಯದರ್ಶಿ ಹನಮಂತಪ್ಪ ಬಂಡಿವಡ್ಡರ, ಮಂಜು ತಳವಾರ, ಪ್ರಕಾಶ ಶಿಗ್ಗಾಂವ, ನಾಗರಾಜ ವಡ್ಡರ, ತಿರಕಪ್ಪ ಹಡಪದ, ಚಮನಸಾಬ ಗುರನಳ್ಳಿ, ನಾರಾಯಣ ಕಾಮನಳ್ಳಿ, ಮರ್ದಾನಸಾಬ, ಮೌಲಾಲಿ, ವಿಜಯ ವಡ್ಡರ, ಮೈನು ತರೂರ, ಖುರ್ಸಾಪುರ, ಮಂಜುನಾಥ ಇದ್ದರು.