ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮತದಾರ ನೋಂದಣಾಧಿಕಾರಿಗಳ ಭತ್ಯೆ ಹೆಚ್ಚಿಸಿ: ಪಾಟೀಲ ಒತ್ತಾಯ

Mainashree
Updated On : 26 Nov 2013, 11:05 am

ಬ್ಯಾಡಗಿ: ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತದಾರರ ನೋಂದಣಾಧಿಕಾರಿಗಳ ವಾರ್ಷಿಕ ಭತ್ಯೆ ಹೆಚ್ಚಳ ಮಾಡುವಂತೆ ನೂತನ ಉಪಾಧ್ಯಕ್ಷ ಬಿ.ಎಂ. ಪಾಟೀಲ ಸರ್ಕಾರವನ್ನು ಒತ್ತಾಯಿಸಿದರು.
ಸ್ಥಳೀಯ ಶಿಕ್ಷಕರ ಸಭಾ ಭವನದಲ್ಲಿ ತಾಲೂಕು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಓ) ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹುತೇಕ ಶಿಕ್ಷಕರು ಇದೊಂದು ರಾಷ್ಟ್ರೀಯ ಕಾರ್ಯಕ್ರಮ ಎಂದು ಭಾವಿಸಿ ಒತ್ತಡದ ನಡುವೆಯೇ ಮತದಾರರ ನೋಂದಣಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಅವರಿಗೆ ವಾರ್ಷಿಕ ರು. 3500 ಗೌರವಧನ ನೀಡುತ್ತಿದ್ದು, ಅದನ್ನು ರು. 10 ಸಾವಿರಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರು.
ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷ ಸರಿಪಡಿಸುವುದು ಸುಲಭದ ಕೆಲಸವೇನಲ್ಲ. ಅದನ್ನು ಶಿಕ್ಷಕರು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಈ ಕೆಲಸದಲ್ಲಿ ರಜಾ ದಿನಗಳಲ್ಲೂ ಲೆಕ್ಕಿಸಿಲ್ಲ. ಈ ಹಿನ್ನೆಲೆಯಲ್ಲಿ 2012 ಹಾಗೂ 2013 ಸಾಲಿನ ಅಕ್ಟೋಬರ್ ಮಧ್ಯಂತರ ರಜೆಯನ್ನು ಗಳಿಕೆ ರಜೆ ಎಂದು ಪರಿಗಣಿಸಬೇಕೆಂದರು.
ತಾಲೂಕಾಧ್ಯಕ್ಷ ಶಾಂತರಾಜ ಕತ್ತೆಬೆನ್ನೂರ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ನಾಗರಾಜ ಶಿಗ್ಗಾಂವಿ, ಕೆ.ಕೆ. ಮಂಜಪ್ಪ, ಬಿ.ಜಿ. ಹೊನ್ನಮ್ಮನವರ, ಕೆ.ಎಂ. ಬನ್ನಿಕೋಡ, ಪಿ.ಬಿ. ಲಕ್ಷ್ಮೇಶ್ವರ, ಎಸ್.ಬಿ. ಹನುಮನಳ್ಳಿಮಠ, ಎಚ್.ಎನ್. ಹೂಗಾರ, ಎಂ.ಪಿ. ಯಲ್ಲಣ್ಣನವರ ಉಪಸ್ಥಿತರಿದ್ದರು.
ಕಾರ್ಯದರ್ಶಿ ಕೆ.ಎಂ. ದಾಮೋದರ ಸ್ವಾಗತಿಸಿದರು. ಸಹಕಾರ್ಯದರ್ಶಿ ಸಿ.ಬಿ. ಪಾಟೀಲ ನಿರೂಪಿಸಿದರು. ಖಜಾಂಚಿ ಎಂ.ಬಿ. ಆಡೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement