ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶೌಚಾಲಯ ನಿರ್ಮಾಣ ಎಲ್ಲರಆದ್ಯತೆಯಾಗಲಿ: ಮಾತನವರ

Mainashree
Updated On : 26 Nov 2013, 11:07 am

ಬ್ಯಾಡಗಿ: ಶೌಚಾಲಯ ನಿರ್ಮಾಣ ಕುಟುಂಬದ ಆದ್ಯತೆಯಾಗಬೇಕು, ಗ್ರಾಮೀಣ ಮಹಿಳೆಯರ ಗೌರವದ ಪ್ರತೀಕವಾಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಶಂಕ್ರಣ್ಣ ಮಾತನವರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬಿಸಲಹಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ನಿರ್ಮಲ ಭಾರತ ಅಭಿಯಾನ ಹಾಗೂ ಬಿಸಲಹಳ್ಳಿ ಗ್ರಾಪಂ ಆಶ್ರಯದಲ್ಲಿ ನಡೆದ ವಿಶ್ವ ಶೌಚಾಲಯ ದಿನಾಚರಣೆ ಮತ್ತು ಸ್ವಚ್ಛತಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯ ಪದ್ಧತಿ ಇನ್ನೂ ಜೀವಂತವಾಗಿದೆ. ಇದರಿಂದ ಹಳ್ಳಿಗಳು ರೋಗದ ತಾಣಗಳಾಗುತ್ತಿವೆ. ಮಹಿಳೆಯರು ಮುಜುಗರ ಎದುರಿಸುವ ಸಂದರ್ಭಗಳು ಎದುರಾಗುತ್ತವೆ. ಇತ್ತೀಚೆಗೆ ಶೌಚಾಲಯದ ಸೌಲಭ್ಯವಿಲ್ಲದ ಕುಟುಂಬದ ಜತೆ ಸಂಬಂಧ ಬೆಳೆಸಲು ಹಿಂದು ಮುಂದು ನೋಡುತ್ತಿದ್ದಾರೆ. ಗ್ರಾಪಂ ನೀಡುವ ಅನುದಾನವನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು. ಕುಟುಂಬದ ಮುಖ್ಯಸ್ಥರು ಮನೆತನದ ಗೌರವ ಕಾಪಾಡುವ ನಿಟ್ಟಿನಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗುವಂತೆ ಕರೆ ನೀಡಿದರು.
ಟಿಈಓ ಎಸ್.ಆರ್. ಪಾಟೀಲ, ಶೌಚಾಲಯ ನಿರ್ಮಿಸಿಕೊಳ್ಳಲು ಮೀನ ಮೇಷ ಮಾಡಿದಲ್ಲಿ ಮುಂದೆ ಪಡಿತರ, ವಿದ್ಯುತ್, ನೀರು ಮುಂತಾದ ಸೌಲಭ್ಯಗಳು ಸಿಗಲಾರವು ಎಂದು ಎಚ್ಚರಿಸಿದರು.
ತಾಪಂ ಅಧ್ಯಕ್ಷೆ ಚಿನ್ನವ್ವ ಪಾಸಿ, ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ನಿರ್ಮಲ ಭಾರತ ಅಭಿಯಾನ ಸಮಾಲೋಚಕಿ ಸುನೀತಾ ನಾಗನಗೌಡ್ರ, ಗ್ರಾಪಂ ಅಧ್ಯಕ್ಷ ಚನ್ನಪ್ಪ ಮುಚ್ಚಟ್ಟಿ, ಉಪಾಧ್ಯಕ್ಷೆ ಗಂಗಮ್ಮ ಮಡಿವಾಳರ, ಸದಸ್ಯ ಚಂದ್ರಪ್ಪ ಕಾಕೋಳ, ಪಿಡಿಓ ಪ್ರದೀಪ್ ಗಣೇಶ್ಕರ, ಬಸವರಾಜ ಹಲಗೇರಿ ಇದ್ದರು. ಶಂಕರ ಲಮಾಣಿ ಸ್ವಾಗತಿಸಿದರು. ಸಾಕ್ಷರತಾ ಸಂಯೋಜಕ ಅರ್.ಎಂ. ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement