ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಎಂಇಎಸ್ ಶಾಸಕನ ಪ್ರತಿಕೃತಿ ದಹನ

Lingaraj Badiger
Updated On : 27 Nov 2013, 11:11 am

ಶಿಗ್ಗಾಂವಿ: ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಮಂಗಳವಾರ ಎಂಇಎಸ್ ಶಾಸಕ ಸಂಭಾಜಿ ಪಾಟೀಲರ ಅಣಕು ಶವಯಾತ್ರೆ ನಡೆಸಿ, ಅವರ ಕನ್ನಡ ವಿರೋಧಿ ನಿಲುವಿಗೆ ಧಿಕ್ಕಾರ ಕೂಗಿದರು.
ಸವಣೂರು ವೃತ್ತದಿಂದ ಕರವೇ ಕಾರ್ಯಕರ್ತರು ಅಣಕು ಶವಯಾತ್ರೆ ಆರಂಭಿಸಿದರು. ಸಂಭಾಜಿ ಪಾಟೀಲರಿಗೆ ಧಿಕ್ಕಾರ ಕೂಗುತ್ತಾ ಪಿಎಸ್‌ಡಿ ಬ್ಯಾಂಕ್ ವೃತ್ತದಲ್ಲಿ ಅವರ ಪ್ರತಿಕೃತಿ ದಹಿಸಿದರು. ತಾಲೂಕು ಕರವೇ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ಕನ್ನಡದ ಮೇಲೆ ಅಭಿಮಾನವಿಟ್ಟು ಮುಖ್ಯಮಂತ್ರಿಗಳು ಹಾಗೂ ವಿಧಾನಸಭಾಧ್ಯಕ್ಷರು ಎಂಇಎಸ್ ಶಾಸಕ ಸಂಭಾಜಿ ಪಾಟೀಲರ ಶಾಸಕತ್ವ ಅನರ್ಹಗೊಳಿಸಿ, ಅವರನ್ನು ತಕ್ಷಣ ಗಡಿಪಾರು ಮಾಡಬೇಕು. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಕನ್ನಡಪರ ಸಂಘಟನೆಗಳೊಂದಿಗೆ ಸೇರಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಮಂಜುನಾಥ ಮಣ್ಣನವರ, ಸಂತೋಷ ಪಾಟೀಲ, ಕೋಟೆಪ್ಪ ಜಾಡರ, ಅರುಣ ಜಕ್ಕಣ್ಣವರ, ಪ್ರಕಾಶ ಕಾಳೆ, ಸಂಗಪ್ಪ ತಳವಾರ, ವಿರೂಪಾಕ್ಷ ಕಳಸದ, ಮರೆಪ್ಪ ಮಾದರ, ಪರಶುರಾಮ ಕಳಸದ, ನಂದೇಶ ಬಸಲಿಂಗಪ್ಪ ನರಗುಂದ ಇದ್ದರು.

ಅಪಘಾತ: ಬೈಕ್ ಸವಾರ ಸಾವು
ಹಾವೇರಿ: ಟೆಂಪೋ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕಲ್ಲಾಪುರ ಬಳಿ ಮಂಗಳವಾರ ಸಂಭವಿಸಿದೆ. ಬ್ಯಾಡಗಿ ತಾಲೂಕಿನ ತಿಮಕಾಪುರ ಗ್ರಾಮದ ಬೀರಪ್ಪ ದೇವಗಿರಿ (25) ಮೃತಪಟ್ಟವ. ಬೈಕ್ ಹಿಂಬದಿ ಸವಾರ ಪ್ರಭು ಕೂಸಮ್ಮನವರ ಎಂಬುವರಿಗೆ ಗಾಯವಾಗಿದ್ದು, ಇಲ್ಲಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement