ಕನಕದಾಸರ ಜಯಂತಿ
ಶಿಗ್ಗಾಂವಿ: ಕನಕದಾಸರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಪಂ ಸದಸ್ಯ ಈಶ್ವರಗೌಡ ಪಾಟೀಲ ಹೇಳಿದರು. ಮಡ್ಲಿ ಗ್ರಾಪಂ ಆವರಣದಲ್ಲಿ ಜರುಗಿದ ಕನಕದಾಸರ 526ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿದ ಅವರು, ನಾಡಿನ ಶ್ರೇಷ್ಠ ಆಧ್ಯಾತ್ಮಿಕ ಚಿಂತಕ ಕನಕದಾಸರು, ಗೌತಮ ಬುದ್ಧ, ಮಹಾವೀರರಂತೆ ಶ್ರೇಷ್ಠ ವಿಚಾರಗಳನ್ನು ಬೋಧಿಸಿ, ಮಾನವತೆಯನ್ನು ಸಾರಿದರು. ಅವು ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂದು ಪಾಟೀಲ ಹೇಳಿದರು. ಗ್ರಾಪಂ ಉಪಾಧ್ಯಕ್ಷೆ ಅನಸವ್ವ ಓಲೇಕಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಯಲ್ಲಪ್ಪಗೌಡ ಪಾಟೀಲ, ಮೈಲಾರೆಪ್ಪ ಹರಿಜನ, ಈರಪ್ಪ ಡಂಬೂರಮತ್ತೂರ, ಯಲ್ಲಪ್ಪ ತಳವಾರ, ಮುದಕಪ್ಪ ಕುರಬರ ಇದ್ದರು.