ವಾಸವಿ ಶ್ರೀಗೆ ಶ್ರದ್ಧಾಂಜಲಿ
ಹಿರೇಕೆರೂರು: ತಾಲೂಕಿನ ರಟ್ಟಿಹಳ್ಳಿ ಗ್ರಾಮದ ಆರ್ಯವೈಶ್ಯ ಸಮಾಜದವರು ಭಂಟೇಶ್ವದ ದೇವಸ್ಥಾನದಲ್ಲಿ ಶ್ರೀವಾಸವಿ ಪೀಠದ ಪ್ರಥಮ ಪೀಠಾಧಿಪತಿ ಚಂದ್ರಶೇಖರಾನಂದಗಿರಿ ಸ್ವಾಮೀಜಿ ಮಂಗಳವಾರ ಬೆಳಗ್ಗೆ ನಿಧನರಾದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದರು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ಎಚ್.ಸಿ. ಅಶೋಕಶೆಟ್ಟಿ ಹಳ್ಳೂರ ಮಾತನಾಡಿ, ಚಂದ್ರಶೇಖರಾನಂದಗಿರಿ ಸ್ವಾಮೀಜಿಗಳು ಸರಳ ಜೀವನ ಉದಾತ್ತ ವಿಚಾರಧಾರೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ಬಹು ಅರ್ಥಪೂರ್ಣವಾಗಿ ಶ್ರಮಿಸಿದರು. ಸ್ವಾಮೀಜಿ ನಿಧನದಿಂದ ಸಮಾಜ ದೊಡ್ಡ ನಷ್ಟ ಅನುಭವಿಸಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಮಾಜವನ್ನು ಪ್ರಗತಿಯತ್ತ ಸಾಗಿಸೋಣ ಎಂದು ತಿಳಿಸಿದರು. ಪ್ರದೀಪ ಶೆಟ್ಟರ, ವಿನಾಯಕ ಬಿ.ಜಿ., ಗಿರೀಶ ಭೀಮಪ್ಪನವರ, ರಾಘವೇಂದ್ರ ಮಾನಪ್ಪನವರ, ಅರುಣ ಕೋಟಿಹಾಳ, ರಮೇಶ ಮಾನಪ್ಪನವರ, ರಮೇಶ ಭೀಮಪ್ಪನವರ, ಜನಾರ್ದನ ಶ್ರೇಷ್ಠಿ ಇದ್ದರು.