ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾನಗಲ್ಲ ಗ್ರಾಮದೇವಿ ದೇವಸ್ಥಾನದಲ್ಲಿ ದೀಪೋತ್ಸವ

Lingaraj Badiger
Updated On : 28 Nov 2013, 11:04 am

ಹಾನಗಲ್ಲ: ಕಾರ್ತಿಕ ಮಾಸದ ಅಂಗವಾಗಿ ಹಾನಗಲ್ಲ ಗ್ರಾಮದೇವಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಸಾಲುದೀಪ ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಯಿತು.
ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹೂವಿನ ಅಲಂಕಾರ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ ಮತ್ತು ಮಹಾ ಮಂಗಳಾರತಿ ಮಾಡಲಾಯಿತು. ಆಭರಣಗಳ ಸಮೇತ ದೇವಿಯನ್ನು ಅಲಂಕರಿಸಲಾಗಿತ್ತು. ಭಕ್ತರು ಕಾಣಿಕೆ ನೀಡಿದ ನೂತನ ಮಂಟಪ ಸಮರ್ಪಿಸಲಾಯಿತು.
ಸಂಜೆ ದೇವಿಗೆ ಪೂಜೆ ಸಲ್ಲಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಪ್ರಾಂಗಣದ ತುಂಬೆಲ್ಲ ಮಹಿಳೆಯರು, ಮಕ್ಕಳು ಕಿರು ಹಣತೆಗಳನ್ನು ಬೆಳಗಿಸಿದರು. ದೇವಸ್ಥಾನದ ಒಳಗೆ ರಂಗೋಲಿ, ದೀಪಗಳ ಸಾಲು ಕಂಗೊಳಿಸಿತು.
ಕಮಾಟಗೇರಿ ಸತ್ಯಸಾಯಿ ಸೇವಾ ಸಮಿತಿ ಹಾಗೂ ಕಿರಣ ಮೂಡ್ಲಿ, ಬಲ್ಲಣ್ಣ ಬಂಕಾಪುರ, ವಾಸುದೇವ ಕಮಾಟಿ, ಮಂಜಪ್ಪ ಕಮಾಟಿ ಇದರ ವ್ಯವಸ್ಥೆ ನಿರ್ವಹಿಸಿದರು. ಅರ್ಚಕ ಲೋಹಿತ್ ಅರ್ಕಸಾಲಿ, ಉದಯ, ಸಂತೋಷ ಪೂಜಾ ಕಾರ್ಯಗಳ ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಸಿ.ಎಂ. ಉದಾಸಿ, ಗಣ್ಯರಾದ ಎಂ.ಬಿ. ಕಲಾಲ, ಕಲ್ಯಾಣಕುಮಾರ ಶೆಟ್ಟರ, ಎಂ.ಎಚ್. ಕಲಾಲ, ದುಶ್ಯಂತ ನಾಗರವಳ್ಳಿ, ಸುರೇಶ ರಾಯ್ಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement