ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಶಾಂತಿಗಾಗಿ ಸಾಹಿತ್ಯ ವಿಚಾರಗೋಷ್ಠಿ

Lingaraj Badiger
Updated On : 30 Nov 2013, 10:56 am

ರಾಣಿಬೆನ್ನೂರು: ಅರಬ್ಬಿ, ಉರ್ದು ಹಾಗೂ ಇಂಗ್ಲಿಷ್ ಭಾಷೆಗೆ ಸೀಮಿತವಾಗಿದ್ದ ಇಸ್ಲಾಮಿ ಸಾಹಿತ್ಯ ಹಾಗೂ ಕುರಾನ್ ಗ್ರಂಥದ ಸಾರಾಂಶವನ್ನು ಕನ್ನಡಕ್ಕೆ ತಂದು, ಇಸ್ಲಾಂ ಕುರಿತಾದ ತಪ್ಪು ಕಲ್ಪನೆಗಳನ್ನು ನಿವಾರಿಸಲು ಶಾಂತ್ರಿ ಪ್ರಕಾಶನ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಮುಖಂಡ ಕಬೀರ ಅಹ್ಮದ ಹೇಳಿದರು. ನ. 30ರಂದು ಸಂಜೆ ನಗರದ ಮಾನ್ವಿ ಕಂಪನಿ ಸಮೀಪದಲ್ಲಿರುವ ಶಿಕ್ಷಕರ ಸಭಾಭವನದಲ್ಲಿ ಶಾಂತಿ ಪ್ರಕಾಶನದ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಹಾಗೂ ಶಾಂತಿಗಾಗಿ ಸಾಹಿತ್ಯ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಕಬೀರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಶಾಂತಿ ಪ್ರಕಾಶನದ ಪ್ರತಿನಿಧಿ ಲಾಲಹುಸೇನ್ ಕಂದಗಲ್ಲ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ, ಹಿರೇಕೆರೂರು ತಾಲೂಕು ಅಧ್ಯಕ್ಷ ಎಸ್.ಪಿ. ಗೌಡರ, ರಾಣಿಬೆನ್ನೂರು ತಾಲೂಕು ಅಧ್ಯಕ್ಷ ಶಿವಾನಂದ ಸಂಗಾಪುರ, ಹಾವೇರಿ ಹುಕ್ಕೆರಿ ಮಠದ ಸದಾಶಿವ ಸ್ವಾಮಿಗಳು, ಶಾಂತಿ ಪ್ರಕಾಶನದ ಜಿಲ್ಲಾ ಕೋಶಾಧ್ಯಕ್ಷ ಎಂ.ಎಂ. ಪಾಟೀಲ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಾರುತಿ ಶಿಡ್ಲಾಪುರ, ಎಸ್‌ಜೆಎಂ ಮಹಿಳಾ ಕಾಲೇಜಿನ ಪ್ರಾಂಶುಪಾಲ ಎಚ್. ರಾಜು, ಸಮಾಜ ಸೇವಕ ದಯಾಲಾಲ ಸಂಘವಿ, ನ್ಯಾಯವಾದಿ ಎನ್.ಎಚ್. ಕಡೆಮನಿ, ಗುತ್ತಿಗೆದಾರ ಬಾಬುಸಾಬ್ ಮೊಮಿನಗಾರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿ.ಎನ್. ವೀರಾಪುರ, ಸಾಹಿತಿ ಲಿಂಗರಾಜ ಸೊಟ್ಟಪ್ಪನವರ, ಎಂ.ಎ. ಖಾನ್ ಆಗಮಿಸುವರೆಂದು ತಿಳಿಸಿದರು. ಸಲೀಂ ಅಹ್ಮದ್, ಮುಕ್ತಾರ ಅಹ್ಮದ್, ಎಂ.ಎ. ಖಾನ್, ತನ್ವೀರ್ ಅಹ್ಮದಖಾನ್ ನದೀಮುಲ್ಲಾ, ಖಲೀಲ ಅಹ್ಮದ ದುರ್ಗದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement