ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಗರ ಸ್ವಚ್ಛತೆ ಎಲ್ಲರ ಜವಾಬ್ದಾರಿ

Lingaraj Badiger
Updated On : 30 Nov 2013, 11:05 am

ಹಾವೇರಿ: ನಗರದಲ್ಲಿ ಸ್ವಚ್ಛತೆ ಕಾಪಾಡುವುದು ಕೇವಲ ನಗರಸಭೆ ಕಾರ್ಯವಲ್ಲ, ನಾಗರಿಕರೂ ತಮ್ಮ ಕರ್ತವ್ಯ ಪಾಲಿಸಬೇಕು. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ನಗರ ಸ್ವಚ್ಛತೆಗೆ ಎಲ್ಲರೂ ಶ್ರಮಿಸಬೇಕು ಎಂದು ನಗರಸಭೆ ಅಧ್ಯಕ್ಷ ಐ.ಯು. ಪಠಾಣ ಹೇಳಿದರು.
ಕೆಯುಐಡಿಎಫ್‌ಸಿ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಕಚೇರಿ ಆಶ್ರಯದಲ್ಲಿ ನಗರದ ನಾಗೇಂದ್ರನಮಟ್ಟಿ ವಾರ್ಡಿನ ಉರ್ದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಡ್ ಮಟ್ಟದ ನೀರು ಸರಬರಾಜು ಹಾಗೂ ಒಳಚರಂಡಿ ಕುರಿತು ತಿಳಿವಳಿಕೆ, ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು. ಪರಿಸರ ಮಾಲಿನ್ಯ ತಡೆಯಲು ಎಲ್ಲರೂ ಸಹಕರಿಸಬೇಕು. ನೀರಿನ ಬಳಕೆಯಲ್ಲೂ ಮಿತವ್ಯಯ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆ ಸದಸ್ಯ ಹನುಮಂತಪ್ಪ ದೇವಗಿರಿ, ನಗರ ಕೊಳಚೆಯಾಗಲು ನಾವೇ ಕಾರಣರು. ಕಸದ ತೊಟ್ಟಿಗಳ ಸದ್ಬಳಕೆ ಮುಖ್ಯ. ಈ ನಿಟ್ಟಿನಲ್ಲಿ ಇಂಥ ಜಾಗೃತಿ ಕಾರ್ಯಕ್ರಮ ಹೆಚ್ಚೆಚ್ಚು ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.
ಪರಿಸರ ಅಭಿಯಂತ ಚಂದ್ರಕಾಂತ ಗುಡ್ನನವರ ತ್ಯಾಜ್ಯ ವಿಲೇವಾರಿ, ನಿರ್ವಹಣೆ, ವಿಂಗಡಣೆ, ಒಳಚರಂಡಿ ಸಂಪರ್ಕದ ಕುರಿತು ಮಾಹಿತಿ ನೀಡಿದರು. ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ ಅರು ಮನೆಗಳ ನಳ ಸಂಪರ್ಕ ಹಾಗೂ ಒಳಚರಂಡಿ ಉಪಯೋಗದಲ್ಲಿ ಜನರ ಪಾತ್ರದ ಕುರಿತು ಮಾತನಾಡಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಈ. ಪ್ರಕಾಶ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ನಗರಸಭೆ ಸದಸ್ಯ ಪರಶುರಾಮ ಮೈಲಾರಪ್ಪನವರ, ಸತೀಶ ಹಾವೇರಿ, ಎ.ಎಸ್. ಸತ್ಯನಾರಾಯಣ ಶೆಟ್ಟಿ, ಉರ್ದು ಶಾಲೆ ಮುಖ್ಯಾಧ್ಯಾಪಕ ಬಿ.ಎಚ್. ಕನಕಪ್ಪನವರ ಇದ್ದರು. ಶಕ್ತಿ ಅಸೋಸಿಯೇಶನ್ ಯೋಜನಾಧಿಕಾರಿ ಮಂಜುನಾಥ ಸಣ್ಣಿಗಣ್ಣನವರ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಎಂ. ಸ್ವಾಗತಿಸಿದರು. ಪುಟ್ಟಪ್ಪ ಹರವಿ ನಿರೂಪಿಸಿದರು. ಕೊಟ್ರೇಶ ಯು.ಎಂ. ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement