ಪುಟ್ಟರಾಜರ ಸ್ಮರಣೆ, ಸಂಗೀತೋತ್ಸವ
ಹಾನಗಲ್ಲ: ಗಾನಯೋಗಿ ಡಾ ಪಂ. ಪುಟ್ಟರಾಜ ಕವಿ ಗವಾಯಿಗಳವರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಡಿ. 1ರಂದು ಹಾನಗಲ್ಲಿನಲ್ಲಿ ಸಂಗೀತೋತ್ಸವ ಹಮ್ಮಿಕೊಂಡಿದ್ದು, ನಾಡಿನ ಮಠಾಧೀಶರು, ಗಣ್ಯರು, ಖ್ಯಾತ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ ಎಂದು ಸ್ಮರಣೋತ್ಸವ ಸಮಿತಿ ಅಧ್ಯಕ್ಷ ನಾಗೇಶ ಪಡೆಪ್ಪನವರ ತಿಳಿಸಿದರು.
ಡಿ. 1ರಂದು ಬೆಳಗ್ಗೆ 9 ಗಂಟೆಗೆ ಗವಾಯಿಗಳವರ ಭಾವಬಿಂಬದ ಮೆರವಣಿಗೆ ನಡೆಸಲಾಗುವುದು. ಮಧ್ಯಾಹ್ನ 3 ಗಂಟೆಗೆ ನಡೆಯುವ ಧರ್ಮ ಸಭೆಯಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ವೀರಶೈವ ಪಂಚಮಸಾಲಿ ಹರಿಹರ ಪೀಠದ ಚರ ಪೀಠಾಧಿಕಾರಿ ಸಿದ್ಧಲಿಂಗೇಶ್ವರ ಸ್ವಾಮೀಜಿ, ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ, ಬಮ್ಮನಹಳ್ಳಿ ವಿರಕ್ತ ಮಠದ ಶಿವಯೋಗೀಶ್ವರ ಸ್ವಾಮೀಜಿ, ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಸ್ವಾಮೀಜಿ ಆಗಮಿಸುವರು. ಶಾಸಕ ಮನೋಹರ ತಹಶೀಲ್ದಾರ ಉದ್ಘಾಟಿಸುವರು. ಮಾಜಿ ಸಚಿವ ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ, ನೆಹರು ಯುವಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ, ಜಿಪಂ ಸದಸ್ಯ ಮಹದೇವಪ್ಪ ಭಾಗಸರ, ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ, ಪುರಸಭಾಧ್ಯಕ್ಷೆ ಲಕ್ಷ್ಮೀ ಹರಿಜನ, ಕೆಪಿಸಿಸಿ ಸದಸ್ಯ ರಾಜಶೇಖರ ಸಾಲಿಮಠ, ಪುರಸಭೆ ಮಾಜಿ ಅಧ್ಯಕ್ಷ ವೈ.ಎಫ್. ಕಿತ್ತೂರ, ಜಿ.ವಿ. ಕಂಬಾಳಿಮಠ, ಸಿ.ಎಸ್. ಬಡಿಗೇರ, ನಾಗಪ್ಪ ಸವದತ್ತಿ, ಕಲ್ಯಾಣಕುಮಾರ ಶೆಟ್ಟರ, ಆನಂದ ಗಡ್ಡದ್ದೇವರಮಠ, ಭೋಜರಾಜ ಕರೂದಿ, ಗುರುಸಿದ್ದಪ್ಪ ಕೊಂಡೋಜಿ, ಏಳುಕೋಟೆಪ್ಪ ಹಾವಳೇರ, ಟಾಕನಗೌಡ ಪಾಟೀಲ, ಕೆ.ಎಲ್. ದೇಶಪಾಂಡೆ, ವಿಷ್ಣುಕಾಂತ ಜಾಧವ, ವಿಕಾಸ ನಿಂಗೋಜಿ, ಮುತ್ತಣ್ಣ ನಾಶಿಕ, ರಾಮಣ್ಣ ಮಾಸನಕಟ್ಟಿ ಪಾಲ್ಗೊಳ್ಳುವರು.
ಅಂದು ಸಂಜೆ 5 ಗಂಟೆಗೆ ನಡೆಯುವ ಸಂಗೀತೋತ್ಸವದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಶಹನಾಯಿ ವಾದಕ ಬಸವರಾಜ ಹೆಡಿಗ್ಗೊಂಡ, ಹಿಂದುಸ್ಥಾನಿ ಗಾಯಕರಾದ ಡಾ ಮೃತ್ಯುಂಜಯ ಅಗಡಿ (ಧಾರವಾಡ), ವಾಣಿ ಹರ್ಡಿಕರ ಅವರ ಸಂಗೀತ ಕಾರ್ಯಕ್ರಮವಿದೆ. ಹೆಜ್ಜೆಗೆಜ್ಜೆ ಕಲಾವಿದರಿಂದ ಭರತನಾಟ್ಯ, ಕಾತವಳ್ಳಿ ವಿನೋದಾ ಅವರಿಂದ ಸುಗಮ ಸಂಗೀತ, ಅಲ್ಲಮಪ್ರಭು ಕಡಕೋಳ ತಬಲಾ, ಸೋಮನಾಥ ಬಿಳೆಬಾಳೆ ಹಾರ್ಮೋನಿಯಂ ವಾದನವಿದೆ ಎಂದು ಉತ್ಸವ ಸಮೀತಿ ಅಧ್ಯಕ್ಷ ನಾಗೇಶ ಪಡೆಪ್ಪನವರ ತಿಳಿಸಿದರು. ನಾಗಪ್ಪ ಸವದತ್ತಿ, ಸಿ.ಎಸ್. ಬಡಿಗೇರ, ಪಿ.ಕೆ. ಪಾರಗಾಂಕರ, ಜಿ.ವಿ. ಕಂಬಾಳಿಮಠ, ಸೋಮಶೇಖರ ಕೋತಂಬರಿ, ಹಾಶಂಪೀರ ಇನಾಮದಾರ, ಹನುಂತಪ್ಪ ಕೋಣನಕೊಪ್ಪ, ಪ್ರಕಾಶ ಸಿಂಧೂರ, ಲಕ್ಷಣ ಮಾಳಿ, ಏಳುಕೋಟೆಪ್ಪ ಹಾವಳೇರ ಇದ್ದರು.