ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಕ್ಕಳ ವಿಕಸನಕ್ಕೆ ಪ್ರತಿಭಾ ಕಾರಂಜಿ ವೇದಿಕೆ: ಸುಜಾತಾ

Lingaraj Badiger
Updated On : 30 Nov 2013, 11:09 am

ಹಿರೇಕೆರೂರು: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ. ವಿದ್ಯಾರ್ಥಿಗಳು ಪಠ್ಯಪುಸ್ತಕದ ಹುಳುವಾಗಿರದೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು ಬೌದ್ಧಿಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಜಿಪಂ ಸದಸ್ಯೆ ಸುಜಾತಾ ಕೊಟಗಮನಿ ಕರೆ ನೀಡಿದರು.
ಪರ್ವತ ಶಿದ್ದೇರಿ ಸರ್ಕಾರಿ ಕಿಪ್ರಾ ಶಾಲೆಯಲ್ಲಿ ಜರುಗಿದ ಕಡೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು, ಸಾಮಾನ್ಯ ಜ್ಞಾನ ಸಂಪಾದಿಸಿ. ಶಿಕ್ಷಕರು ಹಾಗೂ ಪಾಲಕರು ಆಸಕ್ತಿ ವಹಿಸಿ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತುಗೊಳಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ಕುಬೇರಪ್ಪ ಕರಿಯಣ್ಣನವರ ಉದ್ಘಾಟಿಸಿದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆರ್. ಮಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಾನಾಯ್ಕ ಲಮಾಣಿ, ಉರ್ದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮೆಹಬೂಬಸಾಬ ಜೋಕನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಶಾಂತಮ್ಮ ಹಾದಿಮನಿ, ತಾಪಂ ಸದಸ್ಯೆ ಶೋಭಾ ಲಕ್ಕನಗೌಡ್ರ, ಮಾಳಮ್ಮ ಕಚ್ಚರವಿ, ಶಿಕ್ಷಣ ಸಂಯೋಜಕ ಎಂ.ಡಿ. ಕುರುಬರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಂಕರ ಲಮಾಣಿ, ಹಾಲಪ್ಪ ಬಳಗಾವಿ, ಪ್ರಭುಗೌಡ ಗುಬ್ಬಿ, ನೀಲಪ್ಪಕಣವೇರ, ಎಂ.ಬಿ. ರವಿಶೆಟ್ಟರ, ಉಜ್ಜನಗೌಡ ಲಕ್ಕನಗೌಡ್ರ, ಎಚ್.ಎಸ್. ಮಾಜಿಗೌಡ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement