ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಬೋಧಿಸಿ
ಹಿರೇಕೆರೂರು: ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊರೆಯಾಗದಿರುವ ರೀತಿಯಲ್ಲಿ ಬೋಧಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ ಕರೆ ನೀಡಿದರು.
ಬಿಇಒ ಕಚೇರಿ ಹಾಗೂ ತಾಲೂಕು ಮಟ್ಟದ ಗಣಿತ ಶಿಕ್ಷಕರ ವೇದಿಕೆ ಆಶ್ರಯದಲ್ಲಿ ಜರುಗಿದ ಗಣಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನಿರಂತರ ವ್ಯಾಪಕ ಮೌಲ್ಯಮಾಪನ ಶಿಕ್ಷಕರಿಗೆ ಹೊರೆ ಎಂದು ಭಾವಿಸದೆ, ಮಕ್ಕಳಲ್ಲಿ ಹೊಸ ಉತ್ಸಾಹ ತುಂಬುವ ರೀತಿಯಲ್ಲಿ ಬೋಧಿಸಬೇಕು ಎಂದರು. ಹಾವೇರಿಯ ಸಾ.ಶಿ. ಇಲಾಖೆಯ ಶಿಕ್ಷಣಾಧಿಕಾರಿ ಎಂ. ಗುರುಪ್ರಸಾದ ಮಾತನಾಡಿದರು. ಗಣಿತ ಶಿಕ್ಷಕರ ವೇದಿಕೆ ಅಧ್ಯಕ್ಷ ಎಸ್.ಜೆ. ಚಾಮರಾಜ, ಸಾಹಿತಿ ಭೋಜರಾಜ ಪಾಟೀಲ, ಮುಖ್ಯ ಶಿಕ್ಷಕರಾದ ವಿ.ಎಸ್. ಕೊಪ್ಪದ, ಸಿ.ಎಸ್. ಕವಲಿ, ವೈ.ಪಿ. ಜಗಳೂರ, ಎಂ.ಎಂ. ಕೆರೂರ, ಎಸ್.ಎಸ್. ಚಪ್ಪರದಳ್ಳಿ, ಸೌಮ್ಯಾ ಹೊಳಲಕೇರಿ ಇದ್ದರು.
--