ಆಲದಕಟ್ಟಿ: ಮೆಕ್ಕೆಜೋಳ ಕ್ಷೇತ್ರೋತ್ಸವ ಉದ್ಘಾಟನೆ
ರಾಣಿಬೆನ್ನೂರು: ತಾಲೂಕಿನ ಆಲದಕಟ್ಟಿ ಗ್ರಾಮದ ಪ್ರಗತಿಪರ ರೈತ ಮಲ್ಲಿಕಾರ್ಜುನ ಅಣ್ಣಪ್ಪಳವರ ಹೊಲದಲ್ಲಿ ಪಯೋನಿಯರ್ ಕಂಪನಿಯ ಮೆಕ್ಕೆಜೋಳದ ಪ್ರಾತ್ಯಕ್ಷಿಕೆ ಹಾಗೂ ಕ್ಷೇತ್ರೋತ್ಸವ ಏರ್ಪಡಿಸಲಾಗಿತ್ತು. ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಕಡೂರು ಉದ್ಘಾಟಿಸಿದರು.
ಗ್ರಾಮದ ರೈತರಾದ ಸಿದ್ದಪ್ಪ ಕುರುಬರ, ಪ್ರಕಾಶ ಪೂಜಾರ, ಉಜ್ಜಪ್ಪ ಕುಪ್ಪೆಲೂರು, ರವಿ ಅಂಗಡಿ, ಹಲಗೇರಿ ಗ್ರಾಮದ ಶಿವಾಜಪ್ಪ ಕಡೂರು, ನಂದೀಶ ದೇಸಾಯಿ, ಪ್ರಕಾಶ ದೇಸಾಯಿ, ಶಬ್ಬಿರಸಾಬ್ ಪಠಾಣ ತಮ್ಮ ಅನುಭವ ಹಂಚಿಕೊಂಡರು.
ಪಯೋನಿಯರ್ ಕಂಪನಿಯ ಪ್ರತಿನಿಧಿ ಪ್ರಶಾಂತರಡ್ಡಿ ಯರೇಕುಪ್ಪಿ, ಮಲ್ಲೇಶಪ್ಪ ಭತ್ತಿಕೊಪ್ಪ, ಮೆಕ್ಕೆಜೋಳ ಬಿತ್ತನೆ ಹಾಗೂ ರೋಗ ನಿವಾರಣೆ ಕ್ರಮ, ಇಳುವರಿ, ವಾತಾವರಣ ಮತ್ತು ಹವಾಮಾನದಿಂದ ಬರುವ ರೋಗ ನಿಯಂತ್ರಣದ ಕುರಿತು ರೈತರಿಗೆ ಮಾಹಿತಿ ನೀಡಿದರು.