ಜಮೀನು ಕೊಟ್ಟರೆ ಕ್ರೀಡಾಂಗಣ
ಶಿಗ್ಗಾಂವಿ: ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಕ್ರೀಡಾಂಗಣಕ್ಕೆ ಯುವಜನ ಕ್ರೀಡಾ ಇಲಾಖೆಯಿಂದ ಪ್ರಸ್ತಾವನೆ ಕೇಳಿ ಅರ್ಜಿ ನೀಡಲಾಗಿದ್ದು, ಅದಕ್ಕೆ ಬೇಕಾಗುವ 2 ಎಕರೆ ಜಮೀನು ನೀಡಿದರೆ ಸರ್ಕಾರ ಅನುದಾನ ನೀಡಿ, ಕ್ರೀಡಾಂಗಣ ನಿರ್ಮಿಸಲು ಸಿದ್ಧ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗುರನಗೌಡ ಪಾಟೀಲ ಹೇಳಿದರು.
ನ್ಯೂ ಕರ್ನಾಟಕ ಜ್ಯೂನಿಯರ್ ಸ್ಟೇಟ್ ಕ್ಲಬ್ ವತಿಯಿಂದ 19 ವರ್ಷದೊಳಗಿನವರ ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಶ್ರೀ ಮಹರ್ಷಿ ವಾಲ್ಮೀಕಿ ಆಯಿಲ್ ಮಿಲ್ ಆವರಣದಲ್ಲಿ ಉದ್ಘಾಟಿಸಿ, ಮಾರುತಿ ದೇವರ ಆಶೀರ್ವಾದ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದು ಮಾತನಾಡಿದ ಅವರು, ಕ್ರೀಡಾಪಟುಗಳು ಎರಡು ಎಕರೆ ಜಮೀನನ್ನು ದಾನಿಗಳಿಂದ ಪಡೆದರೆ ಕ್ರೀಡಾಂಗಣದ ಕನಸು ನನಸಾಗುತ್ತದೆ ಎಂದರು.
ತಾಪಂ ಸದಸ್ಯ ನಿಂಗಪ್ಪ ಜವಳಿ ಅಧ್ಯಕ್ಷತೆ ವಹಿಸಿ, ಕ್ರೀಡಾಂಗಣಕ್ಕೆ ಸರ್ಕಾರದಿಂದ ರು. 5 ಲಕ್ಷ ಮಂಜೂರಾಗಿದ್ದು, ಜಮೀನು ಸಿಕ್ಕ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು. ಪ್ರದೀಪ ಗಿರಡ್ಡಿ, ನಿಂಗಪ್ಪ ಜವಳಿ, ಮಲ್ಲಿಕಾರ್ಜುನಗೌಡ ಪಾಟೀಲ, ಮುತ್ತನಗೌಡ ಪಾಟೀಲ, ಚನ್ನಪ್ಪ, ಕಾಮರಡ್ಡಿ, ಗುರನಗೌಡ ಪಾಟೀಲ, ರಾಜಶೇಖರ ಅಂಗಡಿ, ಸಹದೇವಪ್ಪ ನೀರಲಗಿ, ಗಂಗಾಧರ ಭೂಸರಡ್ಡಿ, ಶಿವನಗೌಡ, ರಾಮನಗೌಡ, ಪ್ರಕಾಶ ಕುಂಬಾರ, ಗುರುಸಿದ್ದಪ್ಪಗೌಡ ಪಾಟೀಲ, ನಿಸಾರ ಅಹ್ಮದ ಬೇಟಕುರ್ಕಿ, ಈರಪ್ಪ ಇಟಗಿ, ರುದ್ರಪ್ಪ ರಟಗೇರಿ, ಬಸವರಾಜ ದವಲಿ, ದೀಪು ಕಾಮರಡ್ಡಿ ಬಹುಮಾನ, ಸಮವಸ್ತ್ರ ಪ್ರಾಯೋಜಿಸಿದ್ದರು.
ಸಾಕ್ಷರತಾ ರಾಜ್ಯ ಪ್ರಶಸ್ತಿ ವಿಜೇತ ಸಿ.ಆರ್. ಪಾಟೀಲ, ನಿಂಗಪ್ಪ ಸುಣಗಾರ, ಈಶ್ವರಗೌಡ ದ್ಯಾಮಗೌಡ, ತಿಪ್ಪಣ್ಣ ಗುಡಗೇರಿ, ಸುರೇಶ ಗೂಗಿ, ಶಿವರುದ್ರಪ್ಪ ಕೊಡ್ಲಿವಾಡ, ಶೇಖರಗೌಡ ಪಾಟೀಲ, ಈಶ್ವರಗೌಡ ಪಾಟೀಲ, ರಾಮನಗೌಡ ಪಾಟೀಲ ಇದ್ದರು. ಬಸವರಾಜ ಬಳ್ಳಾರಿ ನಿರೂಪಿಸಿ, ಬಸವರಾಜ ಜಂಗಣ್ಣವರ ಸ್ವಾಗತಿಸಿದರು. ಕಾರ್ತಿಕ ಎಲಿಗಾರ ವಂದಿಸಿದರು. ತೀರ್ಪುಗಾರ ಎಂ.ಎನ್. ಮಲ್ಲಾಡದ ಸಹಕರಿಸಿದರು.