ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನ. 6, 7ರಂದು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ

Lingaraj Badiger
Updated On : 26 Oct 2013, 10:52 am

ಹಾವೇರಿ: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಜಿಲ್ಲಾದ್ಯಂತ ನ. 6 ಮತ್ತು 7ರಂದು ಶಾಲಾ ಹಂತದಲ್ಲಿ ಹಾಗೂ ನ. 13ರಿಂದ 17ರ ವರೆಗೆ ಕುಟುಂಬಗಳ ಸಮೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದರು.
ಶುಕ್ರವಾರ ನಡೆದ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸುವ ಕುರಿತ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರು, ಇಲಾಖೆ ಸಿಬ್ಬಂದಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸದಸ್ಯರನ್ನು ಬಳಸಿಕೊಂಡು ತಂಡ ರಚಿಸಿ, ವ್ಯವಸ್ಥಿತವಾಗಿ ಸಮೀಕ್ಷೆ ನಡೆಸುವಂತೆ ಸೂಚಿಸಿದರು.
ದುರ್ಬಲ ಹಾಗೂ ದುರ್ಬಲವಲ್ಲದ ಕ್ಲಸ್ಟರ್‌ಗಳನ್ನು ಗುರುತಿಸಿಕೊಂಡು ಸಮೀಕ್ಷೆ ತಂಡಗಳನ್ನು ನಿಯೋಜಿಸಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಬೇಕು. ತಾಲೂಕುವಾರು ಸಭೆ ನಡೆಸಿ ಅಗತ್ಯ ಸಿಬ್ಬಂದಿ ಪಟ್ಟಿಮಾಡಿ, ಸ್ವಯಂ ಸೇವಾ ಸಂಘಟನೆಗಳನ್ನು ಗುರುತಿಸಿ, ಸ್ವಯಂ ಸೇವಕರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆಯಿರಿ. ಪರಸ್ಪರ ಸಮನ್ವಯತೆಯಿಂದ ಸಮೀಕ್ಷೆ ನಡೆಸುವಂತೆ ಜಿಪಂ ಸಿಇಒ ಉಮೇಶ ಕುಸುಗಲ್ಲ ಹೇಳಿದರು.
ಎಲ್ಲ ನಗರ ಕ್ಲಸ್ಟರ್‌ಗಳನ್ನು ಮತ್ತು 50ಕ್ಕಿಂತ ಹೆಚ್ಚು ಶಾಲೆ ಬಿಟ್ಟ ಮಕ್ಕಳಿರುವ ಗ್ರಾಮೀಣ ಕ್ಲಸ್ಟರ್‌ಗಳನ್ನು ದುರ್ಬಲ ಎಂದು ಗುರುತಿಸಿ, ಶಾಲೆಗಳಲ್ಲಿ 2011-13ರ ಮಕ್ಕಳ ಚಲನಾ ಮಾಹಿತಿ ಹಾಗೂ 2012-14ರ ಮಕ್ಕಳ ಚಲನ ಮಾಹಿತಿ ಪರಿಶೀಲನೆ ಮತ್ತು ಕುಟುಂಬ ಸಮೀಕ್ಷೆ ನಡೆಸಲಾಗುವುದು. 300 ಕುಟುಂಬಗಳಿಗೆ ಒಂದು ಸಮೀಕ್ಷಾ ತಂಡ ಇರುತ್ತದೆ. ಇಬ್ಬರು ಶಿಕ್ಷಕರು, ಒಬ್ಬರು ಎನ್‌ಜಿಓ ಮತ್ತು ಒಬ್ಬರು ಇತರೆ ಇಲಾಖೆಯ ಪ್ರತಿನಿಧಿ ಸೇರಿ ನಾಲ್ಕು ಜನರ ತಂಡ ರಚಿಸಲಾಗುವುದು. ಶಾಲೆ ಬಿಟ್ಟ 50ಕ್ಕಿಂತ ಕಡಿಮೆ ಮಕ್ಕಳಿರುವ ಕ್ಲಸ್ಟರ್‌ಗಳನ್ನು ಗುರುತಿಸಿ, ಅವುಗಳ ವ್ಯಾಪ್ತಿಯ ಶಾಲೆಗಳಲ್ಲಿ 2011-13ರ ಮಕ್ಕಳ ಚಲನ ಮಾಹಿತಿ ಪರಿಶೀಲನೆ ನಡೆಸಲಾಗುವುದು. ಸಮೀಕ್ಷೆ ಕಾರ್ಯಕ್ಕೆ 10 ಶಾಲೆಗಳಿಗೆ ಒಂದು ತಂಡ ಇರಲಿದೆ. ಒಬ್ಬರು ಶಿಕ್ಷಕರು, ಒಬ್ಬರು ಎನ್‌ಜಿಓ ಅಥವಾ ಒಬ್ಬರು ಇತರೆ ಇಲಾಖೆಯ ಪ್ರತಿನಿಧಿ ಇರುತ್ತಾರೆ ಎಂದು ಸಾ.ಶಿ. ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement