ಅವಹೇಳನಕಾರಿ ವರದಿ: ಪ್ರತಿಭಟನೆ
ಶಿಗ್ಗಾಂವಿ: ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ವರದಿ ಖಂಡಿಸಿ ತಡಸ ಗ್ರಾಮದ ಮಹಿಳಾ ಸಂಘಟನೆಗಳು ಹಾಗೂ ಸುಯೋಗ ಚಾರಿಟೇಬಲ್‌ಗಳು ಪ್ರತಿಭಟನೆ ನಡೆಸಿದವು.
ಪ್ರತಿಭಟನಾ ಮೆರವಣಿಗೆ ಮೂಲಕ ಕಂದಾಯ ಇಲಾಖೆಗೆ ತೆರಳಿ ಕಂದಾಯ ಅಧಿಕಾರಿಗೆ ಮನವಿ ಅರ್ಪಿಸಿ, ಇಂಥಹ ಅವಹೇಳನಕಾರಿ ಮಾತು ಆಡುವುದನ್ನು ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿ.ಎಸ್. ಕಂಬಾಳಿಮಠ ಸೋಮಶೇಖರ ಮಹಜನಶೆಟ್ಟರ್, ಸುಭಾಸ ನವಲೂರ, ಎಸ್.ವಿ. ಸೋಮಣ್ಣವರ, ಕಿರಣ ಅವರಾದಿ, ಅಭಿನಂದನ ಅವರಾದಿ, ಡಾ॥ ಜಿ.ಸಿ. ಜಕ್ಕನಗೌಡರ, ಕವಿತಾ ಶೆಟ್ಟರ್, ನೇತ್ರಾವತಿ ಚಿತ್ರಗಾರ, ಅನಸೂಯಾ ಮಂಟೂರ, ಲಕ್ಷ್ಮೀ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.