ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಜಾನಪದ ಹಬ್ಬ

Lingaraj Badiger
Updated On : 28 Oct 2013, 11:14 am

ಹಿರೇಕೆರೂರು: ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಅ. 28ರಂದು ಸಂಜೆ 7-30ಕ್ಕೆ ಜಾನಪದ ಹಬ್ಬ ಜರುಗಲಿದೆ. ಹುಲ್ಲತ್ತಿ ಗ್ರಾಮ ಪಂಚಾಯಿತಿ ಹಾಗೂ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಜಾನಪದ ಹಬ್ಬವನ್ನು ಮಾಜಿ ಶಾಸಕ ಹಾಗೂ ಚಲನಚಿತ್ರ ನಿರ್ಮಾಪಕ ಬಿ.ಸಿ. ಪಾಟೀಲ್ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷ ಜಗದೀಶ ಪಾಟೀಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅಥಿತಿಗಳಾಗಿ ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ್ರ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಕೆ.ಸಿ. ನಾಗರಜ್ಜಿ, ಕಾರ್ಯದರ್ಶಿ ಅಶೋಕ ಚೌಹಾಣ್, ಸಂಘಟನಾ ಕಾರ್ಯದರ್ಶಿ ಹಾಗೂ ಕಿರುತೆರೆ ಕಲಾವಿದ ಗುರುಶಾಂತ ಯತ್ತಿನಹಳ್ಳಿ ಮೊದಲಾದವರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರ ನಟ ಬಸವರಾಜ ತಿರ್ಲಾಪುರ ಅವರನ್ನು ಸನ್ಮಾನಿಸಲಾಗುವುದು. ನಂತರ ರಾಣಿಬೆನ್ನೊರಿನ ಶ್ರೀ ಚಂದನ ಕಿಟ್ಟದ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಬ್ರೆಕ್ ಡ್ಯಾನ್ಸ್ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.  
ನ. 4ರಿಂದ ಹತ್ತಿ ಖರೀದಿ
ಹಿರೇಕೆರೂರು:  ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಂಘದ ವತಿಯಿಂದ ನ. 4ರಿಂದ ಹತ್ತಿ ಖರೀದಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ತಿಳಿಸಿದ್ದಾರೆ. ಸಂಘದ ವತಿಯಿಂದ ಮಾಸೂರು ರಸ್ತೆಯ ಟಿಎಪಿಸಿಎಂಎಸ್‌ನ ಜಿನ್ನ್ನಿಂಗ್ ವ ಪ್ರೆಸ್ಸಿಂಗ್ ಫ್ಯಾಕ್ಟರಿ ಆವರಣದಲ್ಲಿ ನೇರವಾಗಿ ಹತ್ತಿ ಖರೀದಿಸಲಾಗುವುದು. ತಾಲೂಕಿನ ಹತ್ತಿ ಬೆಳೆದ ರೈತರು ಜಿನ್ನ್ನಿಂಗ್ ಕಾರ್ಖಾನೆಗೆ ತಂದು ಮಾರಾಟ ಮಾಡಬೇಕು. ಹತ್ತಿಯ ಗುಣಮಟ್ಟ ನೋಡಿ ಹಾಗೂ ಆ ದಿವಸದ ಮಾರುಕಟ್ಟೆಯ ಬೆಲೆಯಲ್ಲಿ ಖರೀದಿಸಲಾಗುವುದು ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಶಿಬಿರ ಅವಧಿ ಬದಲಾವಣೆ
ಹಾವೇರಿ: ಶಿಗ್ಗಾಂವಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನವೆಂಬರ್ 6ರಂದು ನಡೆಸಲು ಉದ್ದೇಶಿಸಲಾಗಿ ಕಲಾಶ್ರೀ ಶಿಬಿರವನ್ನು ಅಕ್ಟೋಬರ್ 29ರಂದು ಬೆಳಗ್ಗೆ 10-30ಕ್ಕೆ ಏರ್ರ್ಪಡಿಸಲಾಗಿದೆ ಎಂದು ಶಿಗ್ಗಾಂವಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ. ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಕ್ಟೋಬರ್ 28ರೊಳಗಾಗಿ ತಮ್ಮ ಭಾವಚಿತ್ರದೊಂದಿಗೆ ಅರ್ಜಿಯನ್ನು ಶಿಗ್ಗಾಂವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement