ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗ್ರಾಮೀಣ ಕ್ರೀಡೆಗಳ ಪುನರುತ್ಥಾನ ಅಗತ್ಯ

Lingaraj Badiger
Updated On : 28 Oct 2013, 11:22 am

ಹಾನಗಲ್ಲ: ಸೌಹಾರ್ದ ಸಾಮರಸ್ಯಕ್ಕಾಗಿ ಸ್ಫೂರ್ತಿ ನೀಡುವ ಗ್ರಾಮೀಣ ಕ್ರೀಡೆಗಳ ಪುನರುತ್ಥಾನದ ಅಗತ್ಯವಿದ್ದು, ದೇಶಿ ಆಟಗಳಲ್ಲಿನ ಸೊಗಸು ಸಂತಸವನ್ನ್ನು ಸವಿದು ಸಂತೃಪ್ತಿಯಿಂದ ಬದುಕುವ ಕಾಲ ಮತ್ತೆ ಬರಬೇಕು ಎಂದು ಭಾರತ ಸರಕಾರದ ನೆಹರು ಯುವಕೇಂದ್ರ, ಯುವಜನ ಸೇವಾ ಕ್ರೀಡಾ ಸಚಿವಾಲಯದ ಮಹಾನಿರ್ದೇಶಕ ಸಲೀಂ ಅಹಮ್ಮದ್ ಕರೆ ನೀಡಿದರು.
ಹಾನಗಲ್ಲ ತಾಲೂಕಿನ ಸಾಂವಸಗಿಯಲ್ಲಿ ಲೈನ್ಸ್ ಸ್ಪೋರ್ಟ್ಸ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆ ಉಳಿಸಿ, ಬೆಳೆಸಿ: ಗ್ರಾಮಗಳಲ್ಲಿನ ಪ್ರತಿಭಾವಂತ ಕ್ರೀಡಾಪಟುಗಳು ಕೀಳರಿಮೆ ತೊರೆಯಬೇಕು. ಗ್ರಾಮೀಣ ಕ್ರೀಡೆಗಳು ನಶಿಸದಂತೆ ನಿಗಾವಹಿಸುವ ಅಗತ್ಯವಿದ್ದು, ನಮ್ಮ ಬುದ್ಧಿಶಕ್ತ್ನಿ ಜಾಗೃತಗೊಳಿಸುವ ಗ್ರಾಮೀಣ ಕ್ರೀಡೆಗಳು ನಮ್ಮಿಂದ ದೂರವಾಗಬಾರದು.
ಶಾರೀರಿಕ ಶ್ರಮ ಹಾಗೂ ಬೌದ್ಧಿಕ ಶಕ್ತಿಯಾಗಿ ನಮ್ಮನ್ನ್ನು ಸದಾ ಲವಲವಿಕೆಯಿಂದಿಡುವ ಕ್ರೀಡಾ ಚಟುವಟಿಕೆಗಳನ್ನು ನಮ್ಮ ಮಕ್ಕಳಿಗೆ ಬಳುವಳಿಯಾಗಿ ನೀಡಬೇಕು. ಇಂಥ ಆಟಗಳನ್ನು ಜೀವಂತವಾಗಿರಿಸಿ ಮಕ್ಕಳಲ್ಲಿ ಇಚ್ಛಾಶಕ್ತಿ ಬೆಳೆಸುವ ಅಗತ್ಯವಿದೆ ಎಂದರು.
ಸಾಧನೆ ತೋರಿ: ಕ್ರೀಡೆಗಳ ಮೂಲಕ ಒಟ್ಟಾಗಿ ಬದುಕುವುದ್ನು, ನಾಡು, ದೇಶಕ್ಕಾಗಿ ಜೀವಿಸುವುದನ್ನು ಕಲಿಯಬೇಕು. ಗ್ರಾಮಗಳಲ್ಲಿ ಪ್ರತಿಭಾವಂತರು ಸರ್ಕಾರದ ಸೌಲಭ್ಯಗಳನ್ನ್ನು ಬಳಸಿಕೊಂಡು ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ದೇಶದ ಗೌರವ ಕಾಪಾಡುವಂತಾಗಬೇಕು ಎಂದ ಅವರು, ಸದಾ ಯುವಕರ ಸಹಾಯ ಸಹಕಾರಕ್ಕೆ ತಾವು ಸಿದ್ಧ ಎಂದರು.
ಶಿಸ್ತು ಬೆಳೆಸಿಕೊಳ್ಳಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ದೇಶದ ಶಕ್ತಿಯಾಗಿರುವ ಯುವ ಸಮುದಾಯ ಶಿಸ್ತು, ಸಂಯಮದಿಂದ ಬದುಕನ್ನ್ನು ರೂಪಿಸಿಕೊಳ್ಳಬೇಕು ಎಂದರು.
ಹಾದಿ ತಪ್ಪುತ್ತಿರುವ ಯುವಪಡೆ: ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ ಪ್ರಾಸ್ತಾವಿಕ ಮಾತನಾಡಿ, ಕ್ರೀಡೆಗಳು ಗ್ರಾಮ ಜೀವನದಿಂದ ದೂರವಾಗಿ ದುರಭ್ಯಾಸಗಳು ಯುವಕರನ್ನು ಸುತ್ತಿಕೊಳ್ಳುತ್ತಿವೆ. ಗ್ರಾಮೀಣ ಪ್ರದೇಶದಲ್ಲಿನ ಗರಡಿಮನೆ, ಭಜನಾ ಮೇಳ, ಬೆಳದಿಂಗಳ ಆಟಗಳು ಮಾಯವಾಗುತ್ತಿವೆ. ಯುವಶಕ್ತಿಗೆ ಸ್ಫೂರ್ತಿ ನೀಡುವ, ಸಮಾಜಮುಖಿ ಚಿಂತನೆ ಮಾರ್ಗದರ್ಶನ ಮಾಡುವ ಚಿಂತನೆ ಹಿರಿಯರಲ್ಲೂ ಬೇಕಾಗಿದೆ. ಆಟಗಳ ಹೆಸರಿನಲ್ಲಿನ ಸಂಘಟನೆಗಳು ಮುಂದೆ ದುರಭ್ಯಾಸದ ಕೂಟಗಳಾಗಬಾರದು ಎಂದು ಎಚ್ಚರಿಸಿದರು.
ಹೋತನಹಳ್ಳಿ ಸಿಂದಗಿ ಮಠದ ಪಟ್ಟಾಧ್ಯಕ್ಷ ಶ್ರೀಮದ್ ಘನಲಿಂಗ ಚಕ್ರವರ್ತಿ ಶಂಭುಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಎಚ್. ನಾಗರಾಜ, ತಾಪಂ ಸದಸ್ಯೆ ಸುಮಂಗಲಾ ದೊಡ್ಡಮನಿ, ಆರ್.ಬಿ. ಬಾಗೇವಾಡಿ, ಎನ್.ಎಸ್. ಪಡೆಪ್ಪನವರ, ರವಿಕುಮಾರ ಬೆಲ್ಲದ, ಜಿ.ಕೆ. ಪಾಟೀಲ, ರವಿರಾಜ ದೊಡ್ಡಮನಿ, ಎಸ್.ಎಂ. ಪಾಟೀಲ, ಪರಶುರಾಮ ಡೂಗನ್ನವರ, ದುರಗಪ್ಪ ನೀರಲಗಿ, ಹನುಮಂತಪ್ಪ ನಂದಿಕೊಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement