ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತರಬೇತಿಗೆ ಅರ್ಜಿ ಆಹ್ವಾನ

Lingaraj Badiger
Updated On : 28 Oct 2013, 11:14 am

ಹಾವೇರಿ: ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರಸಕ್ತ ಸಾಲಿನ ಸುವರ್ಣ ವಸ್ತ್ರ ನೀತಿ ಯೋಜನೆಯಡಿ ಸೇವಿಂಗ್ ಮಶಿನ್  ಆಪರೇಟರ್ ತರಬೇತಿ ಪಡೆಯಲು ಅಕ್ಟೋಬರ್ 31ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ಒಂದು ತಿಂಗಳ ಅವಧಿಯದಾಗಿದ್ದು, ಜಿಲ್ಲೆಯ ಅರ್ಹ ಸಂಸ್ಥೆಗಳಿಂದ ಅನುಷ್ಠಾನಗೊಳಿಸಲಾಗುವುದು. ಸಿದ್ದ ಉಡುಪು ತಯಾರಿಕಾ ಘಟಕಗಳನ್ನು ಕೆಲಸ ಮಾಡಲು ಅವಶ್ಯವಿರುವ ತಾಂತ್ರಿಕತೆ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿ ಅವಧಿಯಲ್ಲಿ ರು. 2000 ಶಿಷ್ಯವೇತನ ನೀಡಲಾಗುವುದು.
ಸಿದ್ದ ಉಡುಪು ತಯಾರಿಕಾ ಘಟಕಗಳಲ್ಲಿ ಉದ್ಯೋಗ ಹೊಂದಲು ಆಸಕ್ತರಿರುವವರು ಕನಿಷ್ಠ 5ನೇ ತರಗತಿ ಉತ್ತೀರ್ಣರಾದ 18ರಿಂದ 35 ವರ್ಷದೊಳಗಿನ ಯುವತಿಯರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ, ರಹವಾಸಿ ದಾಖಲಾತಿ, ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದವರಿದ್ದರೆ ಜಾತಿ ಪ್ರಮಾಣ ಪತ್ರದೊಂದಿಗೆ ನಿಗಮದ ಮೊಹರಿನೊಂದಿಗೆ ನಿಗದಿತ ಅವಧಿಯೊಳಗೆ ಸಹಾಯಕ ನಿರ್ದೇಶಕರು,  ಕೈಮಗ್ಗ ಮತ್ತು ಜವಳಿ ಇಲಾಖೆ, ನಂ. 43, ಜಿಲ್ಲಾ ಆಡಳಿತ ಹಾವೇರಿ, ದೇವಗಿರಿ-581132 ಅವರಿಗೆ ಅಥವಾ ಆಯಾ ತಾಲೂಕಿನಲ್ಲಿರುವ ತರಬೇತಿ ಸಂಸ್ಥೆಗಳಿಗೆ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ಪರಿಶಿಷ್ಟ ಜಾತಿ/ ಪಂಗಡದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಳ ನಮೂನೆಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ: 08375-249050ಯನ್ನ್ನು ಸಂಪರ್ಕಿಸಬಹುದೆಂದು ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ವಿವಿಧ ಮಾಸಾಶನದಲ್ಲಿ ಹೆಚ್ಚಳ
ಹಾವೇರಿ: ಖಜಾನೆಗಳಿಂದ ವಿತರಣೆಯಾಗುತ್ತಿರುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನವನ್ನ್ನು ಸರ್ಕಾರ ಸೆಪ್ಟೆಂಬರ್ 1ರಿಂದ ಅನ್ವಯವಾಗುವಂತೆ ಶೇ. 40ರಿಂದ ಶೇ. 75ರಷ್ಟು ಅಂಗವೈಕಲ್ಯವಿರುವವರಿಗೆ ಈ ಹಿಂದೆ ನೀಡುತ್ತಿದ್ದ ರು. 400ರನ್ನು ರು. 500ಕ್ಕೆ ಮತ್ತು ಶೇ. 75ಕ್ಕಿಂತ ಹೆಚ್ಚು ಅಂಗವೈಕಲ್ಯವಿರುವವರಿಗೆ ನೀಡುತ್ತಿದ್ದ 1000ವನ್ನ್ನು ರು. 1200ಗೆ ಹೆಚ್ಚಿಸಿದೆ. ನಿರ್ಗತಿಕ ವಿಧವಾ ವೇತವನ್ನು ರು. 400ದಿಂದ ರು. 500ಕ್ಕೆ ಹಾಗೂ ಓಎಪಿ ವೇತನದಲ್ಲಿ 80ಕ್ಕಿಂತ ವಯಸ್ಸು ಮೀರಿದ ಫಲಾನುಭವಿಗಳಿಗೆ ರು. 500ದಿಂದ ರು. 750ಕ್ಕೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಖಜಾನಾಧಿಕಾರಿ ಎಂ.ಎಸ್. ಸವಣೂರ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement