ಶಾಲೆ ಆರಂಭ: ಪಾತ್ರೆ, ಆಹಾರ ಧಾನ್ಯ ಸ್ವಚ್ಛತೆ ಕೈಗೊಳ್ಳಿ
ಹಾವೇರಿ: ಪ್ರಸಕ್ತ ಸಾಲಿನ ಮಧ್ಯಂತರ ರಜಾ ಅವಧಿ ಕೊನೆಗೊಂಡು, ಅಕ್ಟೋಬರ್ 29ರಿಂದ ಶಾಲೆಗಳು ಪುರಾರಂಭವಾಗಲಿವೆ. ಶಾಲೆ ಪ್ರಾರಂಭಕ್ಕೂ ಮುನ್ನ್ನ ಎಲ್ಲ ಪ್ರಾಥಮಿಕ, ಪ್ರೌಢ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮುಖ್ಯೋಪಾಧ್ಯಾಯರು, ಅಡುಗೆಯವರಿಗ್ನೆ ನೀರಿನ ತೊಟ್ಟಿ, ಸಿಂಟೆಕ್ಸ್, ಪಾತ್ರೆ ಪರಿಕರಗಳನ್ನ್ನು ತೊಳೆದು ಮತ್ತು ಆಹಾರಧಾನ್ಯ ಪರಿಶೀಲಿಸಿ ಅಡುಗ್ನೆ ಪ್ರಾರಂಭಿಸಲು ಸೂಚಿಸಬೇಕೆಂದು ಜಿಪಂ ಅಕ್ಷರ ದಾಸೋಹ ಕಾರ್ಯಕ್ರಮದ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಶಾಲೆಯಲ್ಲಿ ಉಳಿದಿರುವ, ಕೀಳು ಗುಣಮಟ್ಟದ ಅಥವಾ ವಾಸನೆ ಬೀರುವ್ನ ವಸ್ತುಗಳನ್ನು ಪರಿಶೀಲಿಸಿ ಉಪಯೋಗಿಸಬೇಕು. ನಿರುಪಯುಕ್ತ ವಸ್ತುಗಳನ್ನ್ನು ಬೇರೆ ಕಡೆ ಸ್ಥಳಾಂತರಿಸಿ, ಅಡುಗೆ ಕೋಣೆಯ್ನ ಅಡುಗೆ ಸಿಬ್ಬಂದಿ ಸಹಾಯ ತೆಗೆದುಕೊಂಡು ಸ್ವಚ್ಛಗೊಳಿಸಬೇಕು. ಅಕ್ಕಿ-ಬೇಳೆ ಮುಗಷ್ಟು ಆದರೆ ಅಥವಾ ವಾಸನೆ ಬಂದರೆ ಉಪಯೋಗಿಸಬಾರದು. ಸಂಪೂರ್ಣ ಹಾಗೂ ಎಚ್ಚರಿಕೆಯಿಂದ ಪೂರ್ವಸಿದ್ಧತೆಯೊಂದಿಗೆ ಮುಂಚಿತವಾಗಿಯೇ ಎಲ್ಲ ಅಡುಗೆ ಸಿಬ್ಬಂದಿ ಮತ್ತು ಮುಖ್ಯೋಪಾಧ್ಯಾಯರು ಶಾಲಾ ಪ್ರಾರಂಭೋತ್ಸವಕ್ಕೂ ಮುನ್ನ ಸಿದ್ದತೆ ನಡೆಸಿಕೊಳ್ಳಬೇಕೆಂದು ಅವರು ಸೂಚನೆ ನೀಡಿದ್ದಾರೆ.