ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಸಿಯೂಟ ಕೊಠಡಿ ನ. 1ರಂದು ಉದ್ಘಾಟನೆ

Lingaraj Badiger
Updated On : 30 Oct 2013, 12:30 pm

ಹಿರೇಕೆರೂರು: ಅಕ್ಷರ ದಾಸೋಹ ಯೋಜನೆ ಅಡಿ ಪಟ್ಟಣದ ಸಹಕಾರಿ ವಿದ್ಯಾವರ್ಧಕ ಸೌಹಾರ್ದ ಸಂಘದ ಶಿಕ್ಷಣ ಸಂಸ್ಥ್ಥೆಗಳಿಗೆ ನಿರ್ಮಿಸಿರುವ ಅಡುಗೆ ಕೋಣೆಗಳ ಕಟ್ಟಡ ನ. 1ರಂದು ಉದ್ಘಾಟನೆಗೊಳ್ಳಲಿದೆ.
ನಾರಾಯಣಜಿ ಖಾನಜಿ ಹಿರಿಯ ಪ್ರಾಥಮಿಕ ಶಾಲೆ, ಡಿ.ಆರ್. ತಂಬಾಕದ ಬಾಲಕರ ಪ್ರೌಢಶಾಲೆ ಸಿಇಎಸ್ ಬಾಲಕಿಯರ ಪ್ರೌಢಶಾಲೆಗಳು, ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆ ಹೊಸಳ್ಳಿ, ರೇಣುಕಾ ಪ್ರೌಢಶಾಲೆ ಚಿಕ್ಕಕಬ್ಬಾರ ಮತ್ತು ಸಿಇಎಸ್ ಪ್ರೌಢಶಾಲೆ ಆಲದಗೇರಿ ಶಾಲೆಗಳಲ್ಲಿ 1500 ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಆರು ಕೊಠಡಿಗಳನ್ನು ನಿರ್ಮಿಸಲಾಗಿದೆ. ಸರ್ಕಾರ ತಾಲೂಕಿನ 77 ಶಾಲೆಗಳಿಗೆ ಅಕ್ಷರ ದಾಸೋಹ ಕೊಠಡಿಗಳನ್ನು ನಿರ್ಮಿಸಲು ರು. 3.60 ಕೋಟಿ ಹಣ ಬಿಡುಗಡೆ ಮಾಡಿದೆ. 25 ಚದರ ಅಡಿಯ 6 ಕೊಠಡಿ ನಿರ್ಮಿಸಲು ರು. 25 ಲಕ್ಷ ಮಂಜೂರಾಗಿದೆ. ಇದರಲ್ಲಿ ಬಿಡುಗಡೆಯಾಗಿದ್ದು ರು. 18.50 ಲಕ್ಷ ಮಾತ್ರ. ಹೀಗಾಗಿ, ಸಂಸ್ಥೆಯೇ ರು. 31 ಲಕ್ಷ ಖರ್ಚು ಮಾಡಿ, 40 ಚದರ ಅಡಿಯ 6 ಕೊಠಡಿ ನಿರ್ಮಿಸಿದೆ. ಅನಾಹುತ ತಪ್ಪಿಸುವ ಸಲುವಾಗಿ ನೀರಿನ ವ್ಯವಸ್ಥೆ, ಸ್ವಚ್ಛತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈ ಅಡುಗೆ ಕೋಣೆಗಳನ್ನು ರಾಜ್ಯೋತ್ಸವದ ದಿನ (ನ. 1) ಶಾಸಕ ಯು.ಬಿ. ಬಣಕಾರ ಉದ್ಘಾಟಿಸುವರು ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಾಟೀಲ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement