ಮೋದಿ ರ್ಯಾಲಿಗೆ 5 ಲಕ್ಷ ಜನ: ನಾಗರಾಜ
ಹಿರೇಕೆರೂರು: ದೇಶವನ್ನು ಸುಭದ್ರಗೊಳಿಸಲು ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಇದಕ್ಕಾಗಿ ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ನಾಗರಾಜ ಕರೆ ನೀಡಿದರು. ಪಟ್ಟಣದ ಕೋಟೆ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಥಿಕತೆ ಸುಧಾರಿಸಿ, ಭಾರತವನ್ನು ಜಗತ್ತಿನ ಮುಂದುವರಿದ ರಾಷ್ಟ್ರವನ್ನಾಗಿ ಮಾಡಬೇಕಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗುವುದು ದೇಶದ ಜನತೆಯ ಆಸೆ. ಬೆಂಗಳೂರಿನಲ್ಲಿ ಅವರ ರ್ಯಾಲಿಗೆ ಕಾರ್ಯಕರ್ತರನ್ನು ಸೆಳೆಯುವ ಉದ್ದೇಶದಿಂದ ಬೂತ್ ಮಟ್ಟದಲ್ಲಿ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರು. 10 ನೋಂದಣಿ ಶುಲ್ಕ ಪಡೆದು, ರಾಜ್ಯದ 52 ಸಾವಿರ ಬೂತ್ಗಳಿಂದ ತಲಾ 10 ಜನ ಭಾಗವಹಿಸುವಂತೆ ಮಾಡಲಾಗುವುದು. ರ್ಯಾಲಿಗೆ 5 ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಮಾತನಾಡಿದರು. ತಾಲೂಕು ಅಧ್ಯಕ್ಷ ಎಸ್.ಆರ್. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಬಸಮ್ಮ ಅಬಲೂರ, ಸಿದ್ದರಾಜ ಕಲಕೋಟಿ, ಮಾಜಿ ಅಧ್ಯಕ್ಷ ಪಾಲಾಕ್ಷಗೌಡ ಪಾಟೀಲ, ನಿಂಗಪ್ಪ ಚಳಗೇರಿ, ಗಂಗಾಧರ ಮಲೆಬೆನ್ನೂರು, ಕಂಠಾಧರ ಅಂಗಡಿ, ಕೊಟ್ರಯ್ಯ ಹಿರೇಮಠ, ಸತ್ಯನಾರಾಯಣ ಶೆಟ್ಟರ್, ರಮೇಶ ಬಾತವ್ವನವರ, ರಾಜು ಸಾಲಿ, ಗಿರಿಜವ್ವ ಸುತ್ತಕೋಟಿ, ದ್ರಾಕ್ಷಾಯಣವ್ವ ಭಾಗವಹಿಸಿದ್ದರು.