ರಾಜ್ಯೋತ್ಸವ ಪ್ರಯುಕ್ತ ನ. 1ರಂದು ರಂಗೋಲಿ ಸ್ಪರ್ಧೆ
ಹಾನಗಲ್ಲ: ತಾಲೂಕು ಕಾಂಗ್ರೆಸ್ ಸೇವಾದಳ ಮತ್ತು ಪಕ್ಷದ ವಿವಿಧ ಘಟಕಗಳ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ. 1ರಂದು ಬೆಳಗ್ಗೆ 10 ಗಂಟೆಗೆ ನಗರದ ಫ್ರೆಂಡ್ಸ್ ಅಸೋಸಿಯೇಶನ್ ಕ್ಲಬ್‌ನಲ್ಲಿ ತಾಲೂಕು ಮಟ್ಟದ ರಂಗೋಲಿ ಸ್ಪರ್ಧೆ ನಡೆಯಲಿದೆ. ಸಂಜೆ 4 ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ. ಸಮಾರಂಭಳನ್ನು ಶಾಸಕ ಮನೋಹರ ತಹಶೀಲ್ದಾರ ಉದ್ಘಾಟಿಸುವರು. ತಾಲೂಕು ಕಾಂಗ್ರೆಸ್ ಸೇವಾದಳ ಮುಖಂಡ ಕೇಶವ ಶೇಷಗಿರಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಹಾವೇರಿ ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಚನ್ನಪ್ಪ ಕಲ್ಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಜಿಪಂ ಸದಸ್ಯ ಮಹದೇವಪ್ಪ ಬಾಗಸರ, ಕೆಪಿಸಿಸಿ ಸದಸ್ಯರಾದ ಸತೀಶ ದೇಶಪಾಂಡೆ, ರಾಜಶೇಖರ ಸಾಲಿಮಠ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ಎಸ್. ಪಡೆಪ್ಪನವರ, ವಕ್ತಾರ ಕೆ.ಎಲ್. ದೇಶಪಾಂಡೆ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಗಣ್ಯರಾದ ದಿಗಂಬರ ದೇಶಪಾಂಡೆ, ನಾಗಪ್ಪ ಸವದತ್ತಿ, ಪುರಸಭೆ ಸದಸ್ಯರಾದ ಶಕೀಲ ಬಾಳೂರ, ಅಶೋಕ ಆರೆಗೊಪ್ಪ, ಲೀಲಾವತಿ ತಳವಾರ ಹಾಗೂ ನಿಂಗಪ್ಪ ಕೋಣನಕೇರಿ ಪಾಲ್ಗೊಳ್ಳುವರು. ರಂಗೋಲಿ ಸ್ಪರ್ಧೆಯ ವಿಜೇತರಿಗೆ ಕ್ರಮವಾಗಿ ರು. 1,500, ರು. 1,000 ಹಾಗೂ ರು. 800 ನಗದು ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.