ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಕ್ಕಿಆಲೂರು ಅಭಿವೃದ್ಧಿಗೆ ನಿರ್ಲಕ್ಷ್ಯ: ಪಾಟೀಲ

Vishwanath S
Updated On : 31 Oct 2013, 11:59 am

ಹಾನಗಲ್ಲ: ಹಾವೇರಿ ಜಿಲ್ಲೆಯ ಅತಿದೊಡ್ಡ ಗ್ರಾಪಂ ಅಕ್ಕಿಆಲೂರು ಅಭಿವೃದ್ಧಿಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಆರೋಪಿಸಿದರು.
ಸೋಮವಾರ ಪ್ರಸ್ತುತ ವರ್ಷದ ಎರಡನೇ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಂದ ತನಿಖೆಯಾಗಬೇಕು. ಕೋಟೆ ಹೊಂಡದಲ್ಲಿ ಕಸಕಡ್ಡಿಗಳು ತುಂಬಿ ನೀರೆಲ್ಲ ಹಸಿರಾಗಿದೆ. ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಗ್ರಾಮದ ರಸ್ತೆ, ಚರಂಡಿ, ಕೋಟೆ ಹೊಂಡವನ್ನು ಕೂಡಲೇ ಸ್ವಚ್ಛಗೊಳಿಸಬೇಕು. ಎಲ್ಲ ಸಮುದಾಯದ ಸ್ಮಶಾನಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು. ಗ್ರಾಪಂ ಆಸ್ತಿ ಅತಿಕ್ರಮಣ ತೆರವುಗೊಳಿಸಬೇಕು. ಗ್ರಾಮದಲ್ಲಿ ಸರ್ಕಾರಿ ಆಸ್ತಿಗಳು ಎಲ್ಲಿವೆ, ಎಷ್ಟಿವೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷೆ ನಂದಿನಿ ವಿರುಪಣ್ಣನವರ, ಎಲ್ಲ ಸದಸ್ಯರ ಸಹಕಾರ ಪಡೆದು, ಪಿಡಿಒ ನೇತೃತ್ವದಲ್ಲಿ ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ವಿಶೇಷ ಸಭೆ ನಡೆಸಿ, ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಅಭಿವೃದ್ಧಿ ಅಧಿಕಾರಿ ಎನ್.ಎಫ್. ಬಂಕಾಪುರ ವಾರ್ಷಿಕ ವರದಿ ಓದಿದರು.
ಗ್ರಾಪಂ ಉಪಾಧ್ಯಕ್ಷ ಪ್ರದೀಪ ಶೇಷಗಿರಿ, ಸದಸ್ಯರಾದ ಸತ್ತರಸಾಬ ಅರಳೇಶ್ವರ, ಬಸವರಾಜ ಕೋರಿ, ಮಲ್ಲೇಶಪ್ಪ ಮಾದರ, ಬಸೀರಖಾನ ಪಠಾಣ, ರಜಿಯಾಬಿ ಹಿತ್ತಲಮನಿ, ಕರೀಂಸಾಬ ಹಿತ್ತಲಮನಿ, ವಿಶಾಲಾಕ್ಷಿ ಪಾಟೀಲ, ಮುಖಂಡರಾದ ಟಾಕನಗೌಡ ಪಾಟೀಲ, ರವಿಕುಮಾರ ಬೆಲ್ಲದ, ಶಿವನಗೌಡ ಪಾಟೀಲ, ರಫೀಕಸಾಬ ಹಿತ್ತಲಮನಿ, ಶಂಭಯ್ಯ ಮಹಾಂತಿನಮಠ, ಇಂದೂಧರ ಸಾಲಿಮಠ, ಅಲ್ತಾಫ ಶಿರಹಟ್ಟಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement