ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೋದರಿ ನಿವೇದಿತಾ 104ನೇ ಜನ್ಮದಿನ ಆಚರಣೆ

Vishwanath S
Updated On : 31 Oct 2013, 11:59 am

ಹಾವೇರಿ: ಬಿಜೆಪಿ ಕಾರ್ಯಾಲಯದಲ್ಲಿ ಸಹೋದರಿ ನಿವೇದಿತಾ ಅವರ 104ನೇ ಜಯಂತಿ ಆಚರಿಸಲಾಯಿತು.
ಚಿಕ್ಕಮಗಳೂರು ಜಿಪಂ ಅಧ್ಯಕ್ಷೆ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ್ರ ಮಾತನಾಡಿ, ಸಹೋದರಿ ನಿವೇದಿತಾ ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಸನ್ಯಾಸತ್ವ ಸ್ವೀಕರಿಸಿ, ಭಾರತದಲ್ಲಿ ಬಡವರ ಹಾಗೂ ಅನಕ್ಷರಸ್ಥರ ಏಳಿಗೆಗಾಗಿ ತೊಡಗಿಸಿಕೊಂಡಿದ್ದರು. ಪಾಶ್ಚಾತ್ಯ ಸಂಪ್ರದಾಯವನ್ನು ತೊರೆದು ಸಂಪೂರ್ಣವಾಗಿ ಭಾರತೀಯರಲ್ಲಿ ವಿಲೀನವಾಗಿ, ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು. ಕೋಲ್ಕತ್ತಾದಲ್ಲಿ ಪ್ಲೇಗ್ ಹರಡಿದಾಗ ಅನೇಕರಿಗೆ ಚಿಕಿತ್ಸೆ ನೀಡಿದ್ದಲ್ಲದೆ, ಸ್ಥಳೀಯ ಮಹಿಳೆಯರನ್ನು ಸಂಘಟಿಸಿ ಇಡೀ ನಗರವನ್ನು ಶುಚಿಗೊಳಿಸಿ, ಪ್ಲೇಗ್ ತಡೆಗಟ್ಟುವಲ್ಲಿ ದಿಟ್ಟತನ ತೋರಿದರೆಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ಶ್ರೀಮಂತ ಮನೆತನದ ಈ ಹುಡುಗಿ ಭಾರತದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಈ ಕ್ರಿಯಾಶೀಲತೆ, ಬದ್ಧತೆಯನ್ನು ಮಹಿಳೆಯರು ಅಳವಡಿಸಿಕೊಂಡಲ್ಲಿ ಸಹೋದರಿ ನಿವೇದಿತಾ ಹಾಗೂ ರಾಣಿ ಚನ್ನಮ್ಮರಂಥ ಧೀರ ಮಹಿಳೆಯರು ಮತ್ತೆ ದೇಶಕ್ಕೆ ಲಭ್ಯವಾಗುವ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಭಾರತಿ ಜಂಬಗಿ, ಜಿಲ್ಲಾ ಉಪಾಧ್ಯಕ್ಷ ವೇದವ್ಯಾಸ ಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ತಾಲೂಕು ಅಧ್ಯಕ್ಷ ಮಲ್ಲೇಶಪ್ಪ ಹರಿಜನ, ನಗರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಕರಬಸಮ್ಮನವರ, ನಗರ ಘಟಕದ ಅಧ್ಯಕ್ಷೆ ಜ್ಯೋತಿ ಸಾತೆನಹಳ್ಳಿ ಇದ್ದರು.
ಸಹೋದರಿ ನಿವೇದಿತಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ, ಹಿರಿಯರಾದ ಶಿವಲಿಂಗಪ್ಪ ಕಲ್ಯಾಣಿ, ನಗರಸಭಾ ಸದಸ್ಯ ಹನುಮಂತ ನಾಯಕ ಬಾದಾಮಿ, ಕರಬಸಪ್ಪ ಹಳದೂರ, ರೇಣುಕಾ ಪೂಜಾರ, ಲತಾ ಗುಂಡೇನಹಳ್ಳಿ, ನಜಬುನ್ನೀಸಾ ನದಾಫ್, ಸುರೇಶ ದೊಡ್ಡಮನಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮೇಶ ಕುರ್ಡೆಕರ, ಯುವ ಮೋರ್ಚಾ ನಗರ ಘಟಕ ಅಧ್ಯಕ್ಷ ವೆಂಕಟೇಶ ದೈವಜ್ಞ, ಮಧುಕರ ನವಲೆ, ಲಕ್ಷ್ಮಣಸಿಂಗ್ ರಜಪೂತ ಉಪಸ್ಥಿತರಿದ್ದರು.
ಸೌಭಾಗ್ಯಮ್ಮ ಹಿರೇಮಠ ನಿರೂಪಿಸಿದರು. ಗೀತಾ ಜೂಜಗಾಂವ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement