ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

Lingaraj Badiger
Updated On : 1 Nov 2013, 11:18 am

ಹಾವೇರಿ: ತಾಲೂಕಿನ ಅಗಡಿ ಗ್ರಾಮದಲ್ಲಿ ಖಾಲಿ ಇರುವ ಒಂದು ಅಂಗನವಾಡಿ ಸಹಾಯಕಿ ಸ್ಥಾನಕ್ಕೆ 18ರಿಂದ 44 ವರ್ಷದೊಳಗಿನ, ಕನಿಷ್ಠ 4ನೇ ತರಗತಿ ಪಾಸಾದ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಾವೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಎಚ್. ಲಲಿತಾ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ನ. 25 ಕೊನೆಯ ದಿನ. ಅರ್ಜಿ ನಮೂನೆ, ಮಾಹಿತಿಗಾಗಿ ಹಾವೇರಿ ಸಿಡಿಪಿಒ ಕಚೇರಿಯನ್ನು ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದು.
ಮೋದಿ ಪ್ರಧಾನಿಯಾಗಲು ಶ್ರಮಿಸೋಣ: ಅಂಗಡಿ
ಹಿರೇಕೆರೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಲು ಹಾಗೂ ಮೋದಿಯವರನ್ನು ಪ್ರಧಾನಮಂತ್ರಿಯಾಗಿಸಲು ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಪಕ್ಷವನ್ನು ಸಂಘಟಿಸೋಣ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎಸ್.ಆರ್. ಅಂಗಡಿ ಕರೆ ನೀಡಿದರು. ಪಟ್ಟಣದ ಕೋಟಿ ಶ್ರೀ ದುರ್ಗಾ ದೇವಸ್ಥಾನದಲ್ಲಿ ವಾರ್ಡ್ ಸಭೆಯಲ್ಲಿ ಮಾತನಾಡಿದ ಅವರು, ವಾಜಪೇಯಿ ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಹೆದ್ದಾರಿಗಳ ಜೋಡಣೆ ಮಾಡಿದ್ದು, ನದಿಗಳ ಜೋಡಣೆ ಮೂಲಕ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿದ್ದು, ಹಳ್ಳಿಗಳನ್ನು ಅಭಿವೃದ್ಧಿ ಮಾಡಲು ಗ್ರಾಮ ಸಡಕ್ ಮುಂತಾದ ಯೋಜನೆ ರೂಪಿಸಿದ್ದರು. ರೈತರಿಗೆ ಅನುಕೂಲವಾಗುವಂತೆ ಹಳ್ಳಿಗಳ ಉದ್ಧಾರ ಮಾಡಬೇಕೆಂಬ ಅವರ ಕನಸು ಹಾಗೇ ಉಳಿದಿದೆ ಎಂದರು. ವಿದೇಶಗಳಲ್ಲಿರುವ ಭಾರತದ ಕಪ್ಪು ಹಣ ತರಿಸಿ, ದೇಶಧ ಜನತೆಯ ಉದ್ದೇಶಕ್ಕೆ ವ್ಯಯಿಸಬೇಕಾಗಿದೆ. 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಹಗರಣ ಇತ್ಯಾದಿಗಳ ಮೂಲಕ ದೇಶವನ್ನು ಕೊಳ್ಳೆ ಹೊಡೆದಿರುವ ಕಾಂಗ್ರೆಸ್‌ನ್ನು ಸೋಲಿಸಬೇಕಿದೆ. ಒಂದು ರುಪಾಯಿಗೆ ಕೆಜಿ ಅಕ್ಕಿ ಕೊಡುವ ರಾಜ್ಯ ಸರ್ಕಾರ ಬೇರೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸಿ, ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಹಗರಣ ಮುಕ್ತ ದೇಶ ನಿರ್ಮಿಸಲು ಮೋದಿ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯಿಸಿದರು. ನಗರ ಘಟಕದ ಮಹಿಳಾ ಘಟಕದ ಅಧ್ಯಕ್ಷರಾಗಿ ನಿಂಗಮ್ಮ ಅಂಗಡಿ, ಉಪಾಧ್ಯಕ್ಷರಾಗಿ ವನಿತಾ ಓಂಕಾರೆಪ್ಪ ಚಕ್ರಸಾಲಿ, ಪ್ರಧಾನ ಕಾರ್ಯದರ್ಶಿಯಾಗಿ ನಂದಾ ಭರಮಗೌಡ್ರ, ನಗರ ಪುರುಷರ ಘಟಕದ ಅಧ್ಯಕ್ಷರಾಗಿ ಕೊಟ್ರಯ್ಯ ಹಿರೇಮಠ, ಉಪಾಧ್ಯಕ್ಷರಾಗಿ ಶಿವಣ್ಣ ಗುತ್ತಲ, ನಾಗಣ್ಣ ಯಡಂಗಳಿ ಆಯ್ಕೆಯಾದರು. ಕಾರ್ಯಕರ್ತರಾದ ಪರಮೇಶಯ್ಯ ಹಿರೇಮಠ, ಹನುಮಂತಪ್ಪ ಪೂಜಾರ, ಕಂಠಾಧರ ಅಂಗಡಿ, ಬಸವರಾಜಪ್ಪ ಯಡಂಗಳಿ, ನಾಗಪ್ಪ ಯಡಂಗಳಿ, ಬಸವರಾಜ ಚಿಂದಿ, ಗಿರೀಶ ರಾಯನಗೌಡ್ರ, ರಂಗಪ್ಪ ನಾಯ್ಕರ, ನಾಗರಾಜ ರಾಯನಗೌಡ್ರ, ವಿರೂಪಾಕ್ಷಯ್ಯ ಹಿರೇಮಠ, ಈರಣ್ಣ ಹಾದ್ರಿಹಳ್ಳಿ, ಶಿದ್ದಪ್ಪ ಮಾಳಗಿ, ರಾಧಾ ಬಡಿಗೇರ, ರುಕ್ಮಿಣಿ ಬಡಿಗೇರ, ನಾಗರತ್ನಾ ಚಿಂದಿ, ಮೈನಾವತಿ ಬಡಿಗೇರ, ಲಲಿತಾ ಯಡಂಗಳಿ, ಪುಷ್ಪಾ ಯಡಂಗಳಿ, ರಾಧಾ ಬಡಿಗೇರ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement