ಈ ಕರುವಿಗೆ ಎರಡು ಬಾಯಿ, ಮೂರು ಕಣ್ಣು!
ಶಿಗ್ಗಾಂವಿ: ದುಂಡಶಿ ತಾಂಡಾ ಗ್ರಾಮದಲ್ಲಿ ವಿಚಿತ್ರ ಆಕಾರದ ಆಕಳ ಕರುವೊಂದು ಜನಿಸಿದೆ.
ತಾಂಡಾದ ರೈತ ಜೀವನ್ ಲಕ್ಷ್ಮಪ್ಪ ಲಮಾಣಿ ಎಂಬುವರ ಮನೆಯಲ್ಲಿ ಆಕಳೊಂದು ಎರಡನೇ ಬಾರಿಗೆ ಜನ್ಮ ನೀಡಿದ ಕರುವಿಗೆ ಎರಡು ಬಾಯಿ, ಎರಡು ನಾಲಿಗೆ ಹಾಗೂ ಮೂರು ಕಣ್ಣುಗಳಿವೆ. ಆರೋಗ್ಯವಾಗಿರುವ ಈ ವಿಚಿತ್ರ ಆಕಾರದ ಕರುವನ್ನು ನೋಡಲು ಗ್ರಾಮಸ್ಥರು, ಪಕ್ಕದ ಊರುಗಳಿಂದಲೂ ಜನ ಬರುತ್ತಿದ್ದಾರೆ.
ಇದು ಅವಳಿ ಕರು. ಕೆಲವೊಂದು ಜೀನ್ಗಳ ತೊಂದರೆಯಿಂದಾಗಿ ಸಮರ್ಪಕವಾಗಿ ಬೇರ್ಪಟ್ಟಿಲ್ಲ. ಇಂಥ ಕರುಗಳು ಜನಿಸುವುದು ವಿರಳ. ಆದರೆ, ವಿಚಿತ್ರವೇನೂ ಅಲ್ಲ ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಸ್.ಎಸ್. ಪಾಟೀಲ ತಿಳಿಸಿದ್ದಾರೆ.