ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ
ಹಾವೇರಿ: ಜಿಲ್ಲೆಯ ನಿರುದ್ಯೋಗಿ ಯುವಕ/ಯುವತಿಯರ್ಝಿಣ ಹಾವೇರಿ ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿ ನಬಾರ್ಡ್ ಸಹಯೋಗದಲ್ಲಿ ವಿವಿಧ ಕೌಶಲಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ನ. 11ರೊಳಗೆ ಅರ್ಜಿ ಸಲ್ಲಿಸಬೇಕು.
ಬೇಸಿಕ್ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ, ಮಹಿಳೆಯರ ವಿಶೇಷ ವಸ್ತ್ರವಿನ್ಯಾಸ, ಮೊಬೈಲ್ ರಿಪೇರಿ, ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿ ನೀಡಲಾಗುವುದು. ಓದು-ಬರೆಹ ತಿಳಿದಿರುವ, 18ರಿಂದ 35 ವಯೋವುತಿಯ, ಕೌಶಲಾಧಾರಿತ ತರಬೇತಿಗೆ ತಾಂತ್ರಿಕತೆಯ ಪ್ರಾಥಮಿಕ ಜ್ಞಾನ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತರಬೇತಿ ಹಾಗೂ ವಸತಿ ಉಚಿತವಾಗಿದೆ ಎಂದು ವೆಬ್‌ಸಿಟಿ ನಿರ್ದೇಶಕರು ತಿಳಿಸಿದ್ದಾರೆ.
ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯೊಂದಿಗೆ ರು. 5ರ ಅಂಚೆ ಚೀಟಿ ಲಗತ್ತಿಸಿದ ಸ್ವವಿಳಾಸದ ಲಕೋಟೆ ಇಟ್ಟು, ನಿರ್ದೇಶಕರು, ವಿಜಯಾ ಬ್ಯಾಂಕ್, ಸ್ವ ಉದ್ಯೋಗ ತರಬೇತಿ ಸಂಸ್ಥೆ, ಡಿ.ಸಿ. ಆಫೀಕ್ ಕಾಂಪ್ಲೆಕ್ಸ್ ಹಿಂಭಾಗ, ದೇವಗಿರಿ, ಹಾವೇರಿ, ದೂ. 08375-249160 - ಇವರಿಗೆ ಸಲ್ಲಿಸಬೇಕು.