ಭ್ರಷ್ಟಾಚಾರ ತಡೆಗೆ ಬಿಜೆಪಿ ಬೆಂಬಲಿಸಿ
ಶಿರಹಟ್ಟಿ: ಕೇಂದ್ರದ ಯುಪಿಎ ಸರ್ಕಾರ ದೇಶದ ಸಂಪತ್ತನ್ನು ಲೂಟಿ ಮಾಡಿದೆ. ಇದನ್ನು ತಡೆಗಟ್ಟಲು ಈ ಬಾರಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗೆ ಅಧಿಕಾರ ನೀಡಿ ಎಂದು ಹಾವೇರಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿ ಮನವಿ ಮಾಡಿದರು.
ಶುಕ್ರವಾರ ತಾಲೂಕಿನ ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ ಗ್ರಾಮಗಳಲ್ಲಿ ಅಪಾರ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರದ ಯುಪಿಎ ಸರ್ಕಾರ ಅತ್ಯಂತ ಭ್ರಷ್ಟವಾಗಿದೆ ಎನ್ನುವುದಕ್ಕೆ 2ಜಿ ಸ್ಪೆಕ್ಟ್ರಂನ ರು. 1.76 ಸಾವಿರ ಕೋಟಿ ಹಗರಣ, ರು. 87 ಸಾವಿರ ಕೋಟಿ ಕಾಮನ್ವೆಲ್ತ್ ಕ್ರೀಡಾಕೂಟ ಹಗರಣ ಹಾಗೂ ಆದರ್ಶ ಅಪಾರ್ಟ್ಮೆಂಟ್ಸ್ ಹಗರಣವೇ ಸಾಕ್ಷಿ. ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶ ಅಧೋಗತಿಗೆ ತಳ್ಳಲ್ಪಟ್ಟಿದೆ. ಕನಿಷ್ಠ ಮಟ್ಟದ ಸಮಸ್ಯೆ ಪರಿಹರಿಸದ ಕೇಂದ್ರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಬೇಡ ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಗಂಗಣ್ಣ ಮಹಾಂತಶೆಟ್ಟರ ಮಾತನಾಡಿ, ದೇಶದ ಪ್ರಧಾನಿಯಾಗುವ ಎಲ್ಲ ಅರ್ಹತೆಯನ್ನು ನರೇಂದ್ರ ಮೋದಿ ಹೊಂದಿದ್ದಾರೆ. ಜನತೆ ಅವರನ್ನು ಬೆಂಬಲಿಸಬೇಕು ಎಂದರು. ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಿಪಂ ಸದಸ್ಯ ಎಂ.ಎಸ್. ದೊಡಗೌಡ್ರ, ತಾಪಂ ಸದಸ್ಯ ನಿಂಬಣ್ಣ ಮಡಿವಾಳರ, ತಿಮ್ಮರಡ್ಡಿ ಅಳವಂಡಿ, ಗ್ರಾಪಂ ಅಧ್ಯಕ್ಷ ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಶಿದ್ರಾಮಪ್ಪ ಮೊರಬದ, ವಿ.ವಿ. ಕಪ್ಪತ್ತನವರ, ಅಶೋಕ ಪಲ್ಲೇದ, ಸಣ್ಣವೀರಪ್ಪ ಹಳ್ಳೆಪ್ಪನವರ, ಬಸಪ್ಪ ಹೊಸಮನಿ, ಗಿರಿಯಪ್ಪ ಯರಗುಪ್ಪಿ, ಶಂಕ್ರಣ್ಣ ಕಾಳೆ, ವಿ.ವಿ. ಮತ್ತೂರ, ಚಂದ್ರಕಾಂತ ನೂರಶೆಟ್ಟರ್, ಜೆ.ಆರ್. ಕುಲಕರ್ಣಿ, ರಿಯಾಜ್ಅಹ್ಮದ್ ಫಣಿಬಂಧ, ಮಹಾಂತೇಶ ಕಲ್ಲಪ್ಪನವರ, ಸುರೇಶ ಅಕ್ಕಿ, ರಾಮಣ್ಣ ಕಂಬಳಿ, ಬಸಣ್ಣ ಹರ್ತಿ, ಬಿ.ಡಿ. ಪಲ್ಲೇದ ಇತರರಿದ್ದರು.