ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಿಂದುಳಿದವರ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮ

Vishwanath S
Updated On : 5 Apr 2014, 11:04 am

ಹಾನಗಲ್ಲ: ಕಾಂಗ್ರೆಸ್ ಬೂಟಾಟಿಕೆ ಪಕ್ಷವಲ್ಲ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಬಡವರ ಸರ್ವತೋಮುಖ ಅಭಿವೃದ್ಧಿಗೆ ಹಲವು ದಶಕಗಳಿಂದ ಶ್ರಮಿಸುತ್ತಿದೆ. ಮೋದಿ ಮೋಡಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಮನೋಹರ ತಹಸೀಲ್ದಾರ್ ಹೇಳಿದರು.
ಗುರುವಾರ ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು, ಕಡ್ಡಾಯ ಶಿಕ್ಷಣ, ಆಹಾರ ಭದ್ರತೆ, ಲೋಕಪಾಲ ಮಸೂದೆಯಂಥ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಲೋಕಪಾಲ ಮಸೂದೆ ಜನತೆಗೆ ನೆರವಾಗಲಿದೆ. ರಾಜ್ಯ ಸರ್ಕಾರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ 169 ಭರವಸೆಗಳಲ್ಲಿ ಈಗಾಗಲೇ ಮಂಡಿಸಿರುವ ಎರಡು ಬಜೆಟ್‌ಗಳಲ್ಲಿ 95 ಅಂಶಗಳು ಈಡೇರಿವೆ. ಆದರೆ, ಇದಾವುವೂ ವಿರೋಧ ಪಕ್ಷಗಳಿಗೆ ಕಾಣುತ್ತಿಲ್ಲ ಎಂದು ಕಿಡಿಕಾರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಹಿಂದುಳಿದ ವರ್ಗಗಳ ತಾಲೂಕು ಘಟಕದ ಅಧ್ಯಕ್ಷ ಏಳುಕೋಟೆಪ್ಪ ಹಾವಳೇರ ಮಾತನಾಡಿದರು. ಮುಖಂಡರಾದ ಜಿ.ಟಿ. ಚಂದ್ರಶೇಖರಪ್ಪ, ಆರ್.ಎಸ್. ಪಾಟೀಲ, ಎಪಿಎಂಸಿ ನಿರ್ದೇಶಕ ಗುಡ್ಡಪ್ಪ ಗೋಯಿಕಾಯಿ, ವೀರೇಶ ಬೈಲವಾಳ, ದಾನಪ್ಪ ಗಂಟೇರ, ಹನಮಂತ್ಪ ವಾಲಿಕಾರ, ಗೌಸಿಯಾ ಹುಡೇದ, ಬಡವಪ್ಪ ಆನವಟ್ಟಿ, ರಾಮಣ್ಣ ಪೂಜಾರ, ನೂರಹ್ಮದ ಅಕ್ಕಿ ಮುಂತಾದವರು ಸಭೆಯಲ್ಲಿದ್ದರು.
ಬಳಿಕ ತಾಲೂಕಿನ ಶಿರಗೋಡ, ಚಿಕ್ಕಾಂಶಿ ಹೊಸೂರು, ಸಮ್ಮಸಗಿ, ಮಂತಗಿ, ಹಿರೇಕಣಗಿ ವಿವಿಧ ಗ್ರಾಮಗಳಲ್ಲಿ ಕಾಂಗೆಸ್ ಅಭ್ಯರ್ಥಿ ಸಲಿಂ ಅಹ್ಮದ್ ಪರ ಶಾಸಕ ಮನೋಹರ ತಹಸೀಲ್ದಾರ್ ಪ್ರಚಾರ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement