ಅಂದು ವಾಜಪೇಯಿ, ಇಂದು ಮೋದಿ
ಗದಗ: ಅಂದು ವಾಜಪೇಯಿ, ಇಂದು ನರೇಂದ್ರ ಮೋದಿ, ಎಂದೆಂದೂ ಬಿಜೆಪಿ ಎಂದು ಬಿಜೆಪಿ ಮುಖಂಡ ನಾರಾಯಣಪ್ಪ ಸೊರಟೂರ ಹೇಳಿದರು.
ಅವರು ಭಾನುವಾರ ಬೆಟಗೇರಿಯ 7ನೇ ವಾರ್ಡ್ ಮುಳಗುಂದರವರ ಓಣಿಯ ಬಯಲಲ್ಲಿ ಬಿಜೆಪಿ 34ನೇ ವರ್ಷದ ಸಂಸ್ಥಾಪನಾ ದಿನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಿಂದಲೂ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಪಕ್ಷ ಅಂದಿನಿಂದಲೂ ಇಂದಿನವರೆಗೆ ಸಾಕಷ್ಟು ರಾಷ್ಟ್ರಾಭಿಮಾನದ, ಸಾಮಾಜಿಕ, ಧಾರ್ಮಿಕ ಕೆಲಸದ ಹೊಣೆಗಾರಿಕೆ ನಿಭಾಯಿಸುತ್ತಾ ಬಂದಿದ್ದು, 34 ವರ್ಷಗಳ ಹಿಂದೆ ಜನಸಂಘದ ಹೆಸರು ಬಿಜೆಪಿ ಪಕ್ಷವಾಗಿ ಪರಿವರ್ತನೆಯಾಗಿದ್ದು ಹೊಸ ನಾಂದಿಗೆ ಕಾರಣ ಎಂದರು.
ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಅಧ್ಯಕ್ಷತೆ ವಹಿಸಿದ್ದರು. ಪಿ.ಬಿ. ಬಣ್ಣದ, ನಗರಸಭೆಯ ಮಾಜಿ ಸದಸ್ಯ ಎಂ.ಜಿ. ಹೊನ್ನಳ್ಳಿ, ಶ್ರೀನಿವಾಸ ಹುಬ್ಬಳ್ಳಿ, ಚಿನ್ನಪ್ಪ ನೆಗಳೂರು, ಈರಣ್ಣ ಹಳ್ಳಿ, ಪರಶುರಾಮ ಶ್ಯಾವಿ, ಬಸವರಾಜ ಗುಂಡಗಿ, ವೀರೇಶ ಬೇಲೇರಿ, ರಾಜೇಶ ಶ್ಯಾವಿ, ರವಿ ಗಂಜಿ, ತುಕಾರಾಮ ಪತಂಗೆ, ಮೈಲಾರಿ ತುರಕಾಣಿ, ಸಿದ್ದು ಪಿಂಡಕೂರ, ನಾಗರಾಜ ಅಮ್ರದ, ಅಶೋಕ ಗಂಜಿ, ಗಣೇಶ ಪವಾರ, ಮುತ್ತು ಕೋಟಿ, ಶಿವರಾಜ ಹೊನ್ನಳ್ಳಿ, ವಿಠ್ಠಲ್ ಕಾಳಗಿ, ಗೌರೀಶ ಬೇಲೇರಿ, ಹಾಲಪ್ಪ ಲಕ್ಕುಂಡಿ, ಪ್ರಶಾಂತ ಹಣಗಿ, ಹರೀಶ ಕೊರ್ಪಡೆ, ಸುರೇಶ ಕೊಳ್ಳಿ, ಗಿರೀಶ ಮಲ್ಲಾಪುರ, ರಾಜು ನೆಗಳೂರು, ರವಿ ಮಡಿವಾಳರ, ರಾಮು ಬಾಲೆಹೊಸೂರ ಬಸ್ಮೆ, ಪತಂಗೆ ಮುಂತಾದವರು ಭಾಗವಹಿಸಿದ್ದರು.