ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪರ್ಯಾಯ ಶಕ್ತಿ ಉದಯ ಖಚಿತ

Rashmi Kasaragodu
Updated On : 7 Apr 2014, 12:44 pm

ಗಜೇಂದ್ರಗಡ: ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಬಳಿಕ ದೇಶದಲ್ಲಿ ಈ ಬಾರಿ ಪರ್ಯಾಯ ಶಕ್ತಿ ಉದಯ ಖಚಿತ ಎಂದು ಸಿಪಿಐಎಂನ ರಾಜ್ಯ ಮುಖಂಡ ನಿತ್ಯಾನಂದ ಸ್ವಾಮಿ ಹೇಳಿದರು.
ಅವರು ಸ್ಥಳೀಯ ಸೇವಾಲಾಲ ಸಮುದಾಯ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರದಲ್ಲಿ ಸತತ 2 ಅವಧಿಗೆ ಅಧಿಕಾರ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2ಜಿ ಮತ್ತು ಕಲ್ಲಿದ್ದಲು ಹಂಚಿಕೆಯಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಹಾಗೂ ಖಾಸಗೀಕರಣ, ಉದಾರೀಕರಣ, ಸಾಮ್ರಾಜ್ಯಶಾಹಿ ಧೋರಣೆಯಿಂದಾಗಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರು ನಿತ್ಯ ಪರದಾಡುವಂತಾಗಿದೆ. ಜಾತಿ ಧರ್ಮಗಳ ಆಧಾರದ ಮೇಲೆ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ದೇಶದ ಪ್ರಗತಿಗಿಂತ ಬಂಡವಾಳ ಶಾಹಿಗಳ ಅಭಿವೃದ್ಧಿಯೇ ಮುಖ್ಯವಾಗಿದೆ.
ದೇಶದಲ್ಲಿ ಗುಜರಾತ ಮಾದರಿ ಆಡಳಿತ ನೀಡುತ್ತೇವೆ ಎಂದು ಹೇಳಿಕೊಳ್ಳುವ ಬಿಜೆಪಿ ಗುಜರಾತ್ದಲ್ಲಿ ನಡೆಯುತ್ತಿರುವ ವಾಸ್ತವ ಆಡಳಿತವನ್ನು ಮರೆಮಾಚಿ ದೇಶದ ಜನತೆಗೆ ತಪ್ಪು ಸಂದೇಶ ನೀಡಲು ಹೊರಟಿದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ಒಂದೇ ನಾಣ್ಯದ ಎರಡು ಮುಖಗಳಂತಿರುವ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ದೇಶದ ಜನತೆ ಸಂಪೂರ್ಣ ತಿರಸ್ಕರಿಸಿ ಪರ್ಯಾಯ ಶಕ್ತಿ ಉದಯಕ್ಕೆ ನಾಂದಿ ಹಾಡಲಿದ್ದಾರೆ ಎಂದರು. ಎಡಪಕ್ಷಗಳಾದ ಸಿಪಿಐಎಂ, ಸಿಪಿಐ, ಹಾಗೂ ಫಾರ್ವರ್ಡ್ ಬ್ಲಾಕ್ ಪಕ್ಷಗಳು ದೇಶದಲ್ಲಿ ನೂರು ಸ್ಥಾನದಲ್ಲಿ ಸ್ಪರ್ಧಿಸಿವೆ. ಅದರಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಎಡಪಕ್ಷಗಳು ಸ್ಪರ್ಧಿಸಿವೆ. ಸಿಪಿಐಎಂ ಚಿಕ್ಕಬಳ್ಳಾಪುರ, ಮತ್ತು ದಕ್ಷಿಣ ಕನ್ನಡ, ಸಿಪಿಐ ಉಡುಪಿ, ಚಿಕ್ಕಮಗಳೂರ ಮತ್ತು ದಾವಣಗೆರೆಯಲ್ಲಿ ಹಾಗೂ ಪಾರ್ವಡ ಬ್ಲಾಕ್ ಪಕ್ಷ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಇನ್ನುಳಿದಂತೆ 22 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಜೆಡಿಎಸ್ಗೆ ಬಾಹ್ಯ ಬೆಂಬಲ ಸೂಚಿಸಲಾಗಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಸೊಪ್ಪಿನ, ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿದರು. ಬಾಲು ರಾಠೋಡ, ಮಾರುತಿ ಚಿಟಗಿ, ಪೀರು ರಾಠೋಡ, ಫಯಾಜ ತೋಟದ, ಎಂ.ಬಿ. ಸೋಂಪುರ, ಬಿ.ಎಸ್. ಶೀಲವಂತರ, ಚನ್ನಪ್ಪ ಗುಗಲೋತ್ತರ, ಕಳಕೇಶ ಉಕ್ಕಿಸಲ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement