ಬಿಜೆಪಿ ಕಾರ್ಯಕರ್ತರ ಪ್ರಚಾರ
ಮುಂಡರಗಿ: ಪಟ್ಟಣದ ಪುರಸಭೆಯ 9ನೇ ವಾರ್ಡ್ನಲ್ಲಿ ಬರುವ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಸಂಜೆ ಬಿಜೆಪಿ ಕಾರ್ಯಕರ್ತರು 16ನೇ ಲೋಕಸಭಾ ಚುನಾವಣೆ ಅಂಗವಾಗಿ ಶಿವಕುಮಾರ ಉದಾಸಿ ಪರ ಮನೆ ಮನೆಗೆ ತೆರಳಿ ಪ್ರಚಾರ ಕೈಕೊಂಡರು.
ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಯಾದ ನರೇಂದ್ರ ಮೋದಿ ಸಾಧನೆಗಳನ್ನೊಳಗೊಂಡ ಕರಪತ್ರಗಳನ್ನು ಮನೆಮನೆಗೆ ತೆರಳಿ ವಿತರಿಸುವ ಮೂಲಕ ಪ್ರಚಾರ ಮಾಡಿದರು. ಈ ಸಂದರ್ಭ ಯುವ ಧುರೀಣ ಮಂಜುನಾಥ ಇಟಗಿ ಮಾತನಾಡಿ, ಮತದಾರರು ಈ ಹಿಂದೆ ದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ಡಿಎ ಸರ್ಕಾರದ ಹಾಗೂ 5 ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ದಿ, ಜನಪರ ಕಾರ್ಯಕ್ರಮ ಗಮನಿಸಿ ಹಾಗೂ ಸಂಸದ ಶಿವಕುಮಾರ ಉದಾಸಿಯವರ ಅಭಿವೃದ್ದಿ ಕೆಲಸಗಳನ್ನು ಮೆಚ್ಚಿ ಈ ಬಾರಿಯೂ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ 9ನೇ ವಾರ್ಡ್ನ ಪುರಸಭೆ ಸದಸ್ಯ ಪರಶುರಾಮ ಕರಡಿಕೊಳ್ಳ, ಶಿವಪ್ಪ ಚಿಕ್ಕಣ್ಣವರ, ಈರಪ್ಪ ಡಂಬಳ, ಮೋಹನ ದೇಸಾಯಿ, ಶಂಕರಗೌಡ ಪಾಟೀಲ, ಶಿವು ನಾಡಗೌಡ, ಯಲ್ಲಪ್ಪ ಕುಕನೂರ, ಶರಣಪ್ಪ ಸಾಂಗ್ಲಿ, ಸುರೇಶ ಮಾಳೆಕೊಪ್ಪ, ಕೃಷ್ಣ ಗಡಾದ ಮುಂತಾದವರು ಪಾಲ್ಗೊಂಡಿದ್ದರು.