ಬಿಜೆಪಿ ಯುವ ಮೋರ್ಚಾ ಮತ ಯಾಚನೆ
ಹಾವೇರಿ: ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಹಾವೇರಿ ವಿಧಾನಸಭಾ ಕ್ಷೇತ್ರದ ಹೂವಿನಶಿಗ್ಲಿ, ನಾಯಿಕೆರೂರ, ಹಲ್ಲಿಕೊಪ್ಪ ಹಾಗೂ ಬಸನಕೊಪ್ಪ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಮನಮನೆಗೆ ತೆರಳಿ ಮತಯಾಚಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ ಮಾತನಾಡಿ, ಕೇಂದ್ರದಲ್ಲಿ ಹತ್ತು ವರ್ಷದಿಂದ ಆಡಳಿತ ನಡೆಸುತ್ತಿರುವ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮಿಂದೆದ್ದಿದೆ. ದೇಶದ ಆರ್ಥಿಕ ದಿವಾಳಿತನಕ್ಕೆ ಪ್ರಧಾನಿ ಮನಮೋಹನ್ಸಿಂಗ್ರ ತಪ್ಪು ಆರ್ಥಿಕ ನೀತಿಯೇ ಕಾರಣ. ಆದ್ದರಿಂದ ದೇಶದ ಉತ್ತಮ ಆರ್ಥಿಕ ಸ್ಥಿತಿಗೆ, ಭವ್ಯ ಭಾರತದ ನಿರ್ಮಾಣಕ್ಕೆ ಮೋದಿ ಅವರ ಕೈಬಲಪಡಿಸಲು ಶಿವಕುಮಾರ ಉದಾಸಿ ಅವರಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು. ನಿಂಗಪ್ಪ ಹೆಬಸೂರ, ಗೋವಿಂದಪ್ಪ ಕಟಗಿ, ಮಾಲಿಂಗಪ್ಪ ಶಿಗ್ಲಿ, ಬಸಣ್ಣ ಶಿರಬಡಗಿ, ಶಂಕ್ರಪ್ಪ ನವಲಗುಂದ, ಮುತ್ತು ಕುಂದಗೋಳ, ರಾಜು ರಾಯಮ್ಮನವರ, ರವಿ, ಶಿಶುವಿನಹಾಳ, ಮಂಜುನಾಥ ಮಡಿವಾಳರ, ವೀರಪ್ಪ ಪೂಜಾರ, ಬಸವರಾಜ ಹಳೇಮನಿ, ಎಚ್.ಕೆ. ಉಪನಾಳ, ಆರ್.ಕೆ. ನಡುವಿನಮಠ, ಎನ್.ವಿ. ನಲೋಗಲ್, ಎಂ.ಬಿ. ಅರಗಂಜಿ, ಎನ್.ಎಚ್. ಲಕ್ಷ್ಮೇಶ್ವರ, ಎನ್.ಎಚ್. ವಾಲೀಕಾರ, ಷರೀಫ್ಖಾನ್ ಖಾಂಜೇರಿ, ಆರ್.ಡಿ. ಹೊನ್ನತ್ತಿ, ಮಲ್ಲೇಶ ಪಲ್ಲೇದ, ಮುದಕಪ್ಪ ಬಾಲೇಹೊಸೂರ, ಬಸವರಾಜ ಕಬಾಡಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.