ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಜೆಪಿಗೆ ಈ ಬಾರಿ ತಕ್ಕ ಪಾಠ: ಶಾಸಕ ರುದ್ರಪ್ಪ ಲಮಾಣಿ

Rashmi Kasaragodu
Updated On : 7 Apr 2014, 12:50 pm

ಹಾವೇರಿ: ಅಧಿಕಾರ ನೀಡಿದ್ದೆ ತಪ್ಪು ಎನ್ನಿಸುವಷ್ಟರ ಮಟ್ಟಿಗೆ ಜನರಿಗೆ ಜಿಗುಪ್ಸೆ ತರಿಸಿರುವ ಬಿಜೆಪಿಗೆ ಈ ಬಾರಿ ಮತದಾರ ತಕ್ಕ ಪಾಠ ಕಲಿಸಲಿದ್ದಾನೆ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು. ಹಾವೇರಿ ವಿಧಾನಸಭಾ ಕ್ಷೇತ್ರದ ಹೊಸಮೇಲ್ಮುರಿ, ಹಳೇಮೇಲ್ಮುರಿ, ಹಂದಿಗನೂರ, ಕೋಣನತಂಬಿಗೆ, ಕೆಸರಳ್ಳಿ, ಮಣ್ಣೂರ, ಶಿರಮಾಪೂರ, ಯಲಗಚ್ಚ, ಅಗಸನಮಟ್ಟಿ, ರಾಮಾಪೂರ, ಬಸನಕಟ್ಟಿ, ಮಾಚಾಪೂರ, ಬೂದಗಟ್ಟಿ, ಸೋಮನಕಟ್ಟಿ, ತಿಮ್ಮೇನಳ್ಳಿಗಳಲ್ಲಿ ಸಲೀಂ ಅಹ್ಮದ್ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.  ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಶಿವಕುಮಾರ ಉದಾಸಿ ಕಳೆದ 5 ವರ್ಷದಲ್ಲಿ ತಾವು ಮಾಡಿದ ಸಾಧನೆಗಳನ್ನು ಹೇಳಿ ಮತಯಾಚನೆ ಮಾಡಲಿ. ಇವರಿಗೆ ನರೇಂದ್ರ ಮೋದಿಯವರ ಮುಖವಾಡವೇಕೆ? ತಮ್ಮ ಸಾಧನೆಗಳನ್ನು ಹೇಳಿದರೆ ಠೇವಣಿ ಕಳೆದುಕೊಳ್ಳವ ಭಯ ಎಂದು ವ್ಯಂಗ್ಯವಾಡಿದರು. ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೆಗಣ್ಣಿ, ಎಸ್.ಎಫ್.ಎನ್. ಗಾಜಿಗೌಡ್ರ, ಈರಪ್ಪ ಲಮಾಣಿ, ನಗರಸಭೆ ಅಧ್ಯಕ್ಷ ಐ.ಯು. ಪಠಾಣ, ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಶಿವಕುಮಾರ ತಾವರಗಿ, ರಾಜಶೇಖರ ಮಾಗಾವಿ, ಅಶೋಕ ತಳವಾರ, ಪರಮೇಶಪ್ಪ ಎಣ್ಣಿ, ಶ್ರೀನಿಧಿ ದೇಶಪಾಂಡೆ, ಎ.ಜಿ.ಪಾಟೀಲ, ನಿಂಗಪ್ಪ ಅಕ್ಕೂರ, ಮೂಕಣ್ಣ ದೇಸಳ್ಳಿ, ಎಂ.ಎಂ. ಮೈದೂರ, ಎಂ.ಎಂ. ಬೇವಿನಹಳ್ಳಿ, ಹೊಸಮನಿ ಸಿದ್ದಣ್ಣ, ಫಕ್ಕೀರಪ್ಪ ನೆಗಳೂರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement