ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದೇಶದ ಉಜ್ವಲ ಭವಿಷ್ಯಕ್ಕೆ ಮೋದಿ ಅನಿವಾರ್ಯ

Mainashree
Updated On : 9 Apr 2014, 10:19 am

ಹಾನಗಲ್ಲ:  ಜನಸಾಮಾನ್ಯರ ರಕ್ಷಣೆಗೆ ಹಾಗೂ ದೇಶದ ಭವ್ಯ ಭವಿಷ್ಯಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಅನಿವಾರ್ಯ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತಯಾಚನೆ ನಡೆಸಿ ಅವರು ಮಾತನಾಡಿದರು.
ಸೂಕ್ತ ರಕ್ಷಣೆಯಿಲ್ಲದೇ ಸಾವಿರಾರು ಸೈನಿಕರು ನಿತ್ಯ ಭಯೋತ್ಪಾದಕರ ದಾಳಿಗೆ ಬಲಿಯಾಗುತ್ತಿದ್ದಾರೆ. ಕಳೆದ 10 ವರ್ಷಗಳ ಅವಧಿಯಲ್ಲಿ ರು. 6 ಲಕ್ಷ ಕೋಟಿಗೂ ಅಧಿಕ ಹಣ ಕೊಳ್ಳೆ ಹೊಡೆದ ಕೇಂದ್ರದ ಕಾಂಗ್ರೆಸ್ ದೇಶವನ್ನು ಸಂಪೂರ್ಣ ಮುಳುಗಿಸಿದ್ದು, ಆರ್ಥಿಕವಾಗಿ ಸಂಕಷ್ಟಕ್ಕೆ ನೂಕಿದೆ ಎಂದರು.ರೈತ ಮುಖಂಡ ಎ.ಎಸ್. ಬಳ್ಳಾರಿ ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರದ ಹಗರಣಗಳಿಂದಾಗಿ ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದರು. ಟಿಎಪಿಸಿಎಂಎಸ್ ಅಧ್ಯಕ್ಷ ವಿಜಯೇಂದ್ರ ಕನವಳ್ಳಿ, ತಾಪಂ ಮಾಜಿ ಸದಸ್ಯ ಮನೋಜ ದೇಸಾಯಿ, ಮುಖಂಡರಾದ ರಾಜಣ್ಣ ಅಂಕಸಖಾನಿ, ಉದಯಕುಮಾರ ವಿರೂಪಣ್ಣನವರ, ಕುಮಾರಸ್ವಾಮಿ ಹಿರೇಮಠ, ಬಂಗಾರೆಪ್ಪ ಕರೆಗಿಡ್ಡನವರ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement