ಸಲೀಂ ಅಹ್ಮದ್ ಪರ ಪ್ರಚಾರ
ಲಕ್ಷ್ಮೇಶ್ವರ: ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ಕಾರ್ಯ ಕೈಗೊಂಡಿರುವ ಕಾಂಗ್ರೆಸ್ ಮುಖಂಡರು ಸೋಮವಾರ ಅನೇಕ ಗ್ರಾಮಗಳಲ್ಲಿ ಸಂಚರಿಸಿ ಮನೆಮನೆಗೆ ತೆರಳಿ ಮತ ಯಾಚಿಸಿದರು. ಶಾಸಕ ರಾಮಕೃಷ್ಣ ದೊಡ್ಡಮನಿ ಮತ್ತು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಎಸ್.ಎನ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಅಂಗಡಿ, ಮಾಜಿ ಅಧ್ಯಕ್ಷ ಯು.ಎನ್. ಹೊಳಲಾಪುರ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು. ಸೋಮವಾರ ಬೆಳಗ್ಗೆಯಿಂದಲೇ ಪ್ರಚಾರ ಕಾರ್ಯ ಪ್ರಾರಂಭಿಸಿರುವ ಮುಖಂಡರು ಗೊಜನೂರು, ಅಕ್ಕಿಗುಂದ, ಮಾಗಡಿ ಸೇರಿದಂತೆ ಪ್ರಮುಖ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಚನ್ನಪ್ಪ ಜಗಲಿ, ಸುಶೀಲವ್ವ ಲಮಣಿ, ಎಸ್.ಪಿ. ಪಾಟೀಲ, ಜಯಕ್ಕ ಕಳ್ಳಿ, ಲೋಕೇಶ ದೊಡ್ಡಮನಿ, ಪರಮೇಶ ಲಮಾಣಿ, ಗೇಮಪ್ಪ ಲಮಾಣಿ, ಶೇಖಪ್ಪ ಲಮಾಣಿ, ಶಂಕ್ರಯ್ಯ ಹಿರೇಮಠ, ದೇವಪ್ಪ ಲಮಾಣಿ, ನೇಮಪ್ಪ ಲಮಾಣಿ, ಮಹೇಶ ಲಮಾಣಿ ಮತ್ತಿತರರು ಇದ್ದರು.